ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಾರ್ಕಳದ ಯುವಕ ಮತ್ತು ಅಮೇರಿಕಾದ ಯುವತಿ ಸರಳ ವಿವಾಹದವಾದರು. ಅಮೇರಿಕದಲ್ಲಿ ವಾಸವಾಗಿರುವ ಟ್ಯಾಮ್ರ ಎಂಬ ಯುವತಿ ಕಾರ್ಕಳದ ಅನಂತಶಯನದ ಸುಶಾಂತ್ ನಾಯಕ್ ಎಂಬುವವರನ್ನು ಪ್ರೀತಿಸುತ್ತಿದ್ದರು. ಕಳೆದ ಕೆಲ ವರ್ಷದ ಹಿಂದೆ ಸುಶಾಂತ್ ಅವರು ಕಾರ್ಯನಿಮಿತ್ತ ಡೆಲ್ಲಿಗೆ ತೆರಳಿದಾಗ ಟ್ಯಾಮ್ರ ಪರಿಚಯವಾಗಿದ್ದು ನಂತರ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.
ಈ ಬಗ್ಗೆ ಟ್ಯಾಮ್ರ ರವರು ತನ್ನ ತಂದೆ ತಾಯಿಗಳ ಬಗ್ಗೆ ಈ ಬಗ್ಗೆ ಪ್ರಸ್ತಾಪಿಸಿದಾಗ ಇದಕ್ಕೆ ಒಪ್ಪಿಗೆ ಸೂಚಿಸಿದರು. ಸುಶಾಂತ್ ಮನೆಯಲ್ಲೂ ಮದುವೆಗೆ ಒಪ್ಪಿದ್ದು ನೀಡಿದ್ದು ಸೋಮವಾರ ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ವಿವಾಹವಾದರು. ವಿವಾಹದಲ್ಲಿ ವರನ ಕಡೆಯವರು ಬಾಗಿಯಾಗಿದ್ದು, ವಧುವಿನ ವಧುವಿನ ತಂದೆ ತಾಯಿಗಳಿಗೆ ಮದುವೆಯಲ್ಲಿ ಬಾಗವಹಿಸಲು ಸಾದ್ಯವಾಗಿಲ್ಲ, ಬಾರತ ಸಂಸ್ಕ್ರತಿ ಸಂಸ್ಕಾರಕ್ಕೆ ಮನಸೋತು ಭಾರತದ ಯುವಕನನ್ನೇ ಮದುವೆಯಾಗಿರುದಾಗಿ ಟ್ಯಾಮ್ರ ತಿಳಿಸಿದ್ದಾರೆ.
