ಬಂಟ್ವಾಳ: ಇಲ್ಲಿನ ಸಂಗಬೆಟ್ಟು ನಿವಾಸಿ ರಿಕ್ಷಾ ಚಾಲಕ ಭೋಜ ಶೆಟ್ಟಿಗಾರ್ ಇವರಿಗೆ ಪ್ರಾಕೃತಿಕ ವಿಕೋಪ ಯೋಜನೆಯಡಿ ಮಂಜೂರಾದ ರೂ 43,500 ಮೊತ್ತದ ಚೆಕ್ಕನ್ನು ಇಲ್ಲಿನ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮತ್ತು ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ್ ಈಚೆಗೆ ಹಸ್ತಾಂತರಿಸಿದರು.
ಪ್ರಮುಖರಾದ ರಾಮಕೃಷ್ಣ ಮಯ್ಯ, ರತ್ನಕುಮಾರ್ ಚೌಟ, ಸತೀಶ ಪೂಜಾರಿ, ದಿನೇಶ ಶೆಟ್ಟಿ ದಂಬೆದಾರು, ಸುದರ್ಶನ್ ಬಜ, ಶಶಿಕಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

