ಮೂಡುಬಿದಿರೆ: ಕರ್ನಾಟಕ ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ತಾಲೂಕು ಹಾಗೂ ದ.ಕ.ಜಿ.ಪಂ.ಸ.ಪ.ಪೂ ಕಾಲೇಜು, ಕಲ್ಲಡ್ಕ ಶ್ರೀರಾಮ ಕಾಲೇಜು ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ನಡೆಯಿತು. ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು 19 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Dist Level YOGA
ಮುಂದಿನ ತಿಂಗಳಿನಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಳ್ವಾಸ್ ಕಾಲೇಜಿನಿಂದ 6 ಜನ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

ಫಲಿತಾಂಶ : 19 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶಂಕ್ರಪ್ಪ (ಪ್ರಥಮ ಸ್ಥಾನ), ರುದ್ರಮನಿ (ತೃತೀಯ ಸ್ಥಾನ), ರಿದಮಿಕ್‍ನಲ್ಲಿ ಮಹೇಶ್ (ಪ್ರಥಮ ಸ್ಥಾನ), ಆರ್ಟಿಸ್ಟಿಕ್‍ನಲ್ಲಿ ಗಣೇಶ (ಪ್ರಥಮ ಸ್ಥಾನ), ರಿದಮಿಕ್‍ನಲ್ಲಿ ಪೂಜಾ ವಿ ಎಸ್ (ಪ್ರಥಮ ಸ್ಥಾನ), ಆರ್ಟಿಸ್ಟಿಕ್‍ನಲ್ಲಿ ಸವಿತಾ ಪಾಟೀಲ (ಪ್ರಥಮ ಸ್ಥಾನ).

By Suddi9

Leave a Reply

Your email address will not be published. Required fields are marked *