ಮೂಡುಬಿದಿರೆ: ಗಂಟಾಲ್ಕಟ್ಟೆಯ ನಿತ್ಯ ಸಹಾಯ ಮಾತಾ ಚರ್ಚ್‍ನಲ್ಲಿ ಮೋಂತಿ ಫೆಸ್ಟ್ ಆಚರಿಸಲಾಯಿತು. ಚರ್ಚ್ ಮಹಾದ್ವಾರದ ಬಳಿ ಇರುವ ನಿತ್ಯ ಸಹಾಯ ಮಾತೆಯ ಪ್ರತಿಮೆ ಬಳಿ ಚರ್ಚ್‍ನ ಧರ್ಮಗುರುಗಳಾದ ರೆ.ಫಾ. ಜೇಸುದಾಸ್ ಅವರು ಪ್ರಾರ್ಥನಾ ವಿಧಿ ಹಾಗೂ ಪೂಜೆಯನ್ನು ನೆರವೇರಿಸಿ, ಪವಿತ್ರ ಜಲವನ್ನು ಚಿಮುಕಿಸಿ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ತೆನೆ ಹಬ್ಬ ಆಚರಿಸಲಾಗುತ್ತಿದ್ದು, ನಮ್ಮ ಊರಿನಲ್ಲಿರುವ ಕೃಷಿಕರ ಭೂಮಿ ಸಂಪದ್ಭರಿತವಾಗಲಿ ಎಂದು ಹಾರೈಸಿದರು.

ರೈತರು ಬೆಳೆಸಿ ಹೊತ್ತು ತಂದ ತೆನೆಗೆ ಭಕ್ತಾದಿಗಳು ಹೂ ಅರ್ಪಿಸಿ ಪ್ರಾರ್ಥಿಸಿದರು. ಸುನೀತಾ ಮಿನೇಜಸ್ ಪ್ರಸ್ತಾವನೆಗೈದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಲ್ವಿನ್ ಸಂತೋಷ್ ಮಿನೇಜಸ್, ಕಾರ್ಯದರ್ಶಿ ಆಲ್ವಿನ್ ಮಿನೇಜಸ್, ಕಥೊಲಿಕ್ ಸಭಾ ಗಂಟಾಲ್ಕಟ್ಟೆ ಘಟಕದ ಅಧ್ಯಕ್ಷೆ ಅನಿತಾ ಕೊರೆಯಾ, ಮಹಿಳಾ ಘಟಕದ ಅಧ್ಯಕ್ಷೆ ಪ್ರೆಸಿಲ್ಲಾ ರೋಡ್ರಿಗಸ್, ಐ.ಸಿ.ವೈ.ಎಂ. ಅಧ್ಯಕ್ಷ ವೆಲೆಂಟೆನ್ ಮಿರಾಂದಾ, ಮೆಲ್ವಿನ್ ಡಿಕೋಸ್ತ ಮತ್ತಿತರರು ಉಪಸ್ಥಿತರಿದ್ದರು.
