ಮೂಡುಬಿದಿರೆ: ಬಂಟ್ವಾಳ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ಆಯೋಜಿಸಿರುವ `ರಾಜ್ಯದ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ರಥಯಾತ್ರೆಯು ಮಂಗಳವಾರ ಮೂಡುಬಿದಿರೆಗೆ ಆಗಮಿಸಿತು.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮೂಡುಬಿದಿರೆ ತಹಸೀಲ್ದಾರ್ ರಶ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ಅರಮನೆಬಾಗಿಲು ಬಳಿಯಿರುವ ಪದ್ಮಾವತಿ ಕಲಾಮಂದಿರದಲ್ಲಿ ರಥವನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಸದಸ್ಯರಾದ ಪುರುಷೋತ್ತಮ ಅಂಚನ್, ಸಂದೀಪ್ ಸಾಲ್ಯಾನ್, ಪುರುಷೋತ್ತಮ ಸಾಲ್ಯಾನ್, ರಾಮಚಂದ್ರ ಕರೆಂಕಿ, ವಿಠಲ ಡಿ.ಅಮೀನ್ , ನವೀನ್ ಸೇಸಗುರಿ, ನಾಗೇಶ್ ಕರೆಂಕಿ, ಪ್ರವೀಣ್ ಅಲಂಗಾರು, ನವೀನ್ ಪಾಣೆ ಮಂಗಳೂರು, ಉದಯಕುಮಾರ್, ದೀಪಕ್ ಸಾಲ್ಯಾನ್, ಮೂಡುಬಿದಿರೆ ಕ್ಷೇತ್ರ ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
