ಮೂಡುಬಿದಿರೆ: ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ನಡೆದ 32ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳದ ಹರಿಕೆ ಸೇವಾ ಚಿಕ್ಕಮೇಳದ ಸ್ಥಾಪಕ, ಸಂಚಾಲಕರಾಗಿ ಕಳೆದ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭಾಗವತ ಸಂಪಿಗೆ ಸುರೇಂದ್ರ ಪೈ, ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಶ್ರುತ, ಅಯನಾ ವಿ. ರಮಣ್, ಶ್ರಾವ್ಯ, ಬಿ. ಮೇಘನಾ ರಾವ್ ಹಾಗೂ ತಬಲ್‍ವಾದಕರಾಗಿ ವಿದೇಶಯಾನಗೈದಿರುವ ಎ. ರಘುನಾಥ ಮೂಡಬಿದಿರೆ, ಯಕ್ಷಗಾನೀಯ ಶ್ರೀಕೃಷ್ಣ ವೇಷಧಾರಿಯಾಗಿ 26ನೇ ವರ್ಷದಲ್ಲಿ ಸೇವೆ ಸಲ್ಲಿಸಿರುವ ಮಳಲಿ ದಿವಾಕರ ಕುಲಾಲ್, ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಇವರನ್ನು ಪುರಸ್ಕರಿಸಲಾಯಿತು. ಯಕ್ಷಗಾನ ಹಿಮ್ಮೇಳವಾದಕರಿಗೆ ಗೌರವಧನ ನೀಡಲಾಯಿತು.

mosaru kudike sanmana
ಈ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ , ಉದ್ಯಮಿ ಶ್ರೀಪತಿ ಭಟ್, ಎಂ. ಜಯರಾಮ ಶೆಟ್ಟಿ , ದೇವಿಪ್ರಸಾದ್ ಶೆಟ್ಟಿ, ಲಯನ್ಸ್ ಅಧ್ಯಕ್ಷ ಡಾ.ಕೆ. ಎನ್. ಶೆಟ್ಟಿ, ರೋಟರಿ ಅಧ್ಯಕ್ಷ ಡಾ.ರಮೇಶ್‍ಕುಮಾರ್, ಜಿಲ್ಲಾ ಬಿಜೆಪಿ ಪ್ರ. ಕಾರ್ಯದರ್ಶಿ ಸುದರ್ಶನ ಎಂ., ಸಂಘಟನೆಯ ಗೌರವಾಧ್ಯಕ್ಷ ಪ್ರಮಥ್ ಕುಮಾರ್, ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಗುರುಪ್ರಸಾದ್ ಉಪಸ್ಥತರಿದ್ದರು.
ನೂತನ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ. ಅವರು ಕೀರ್ತಿಶೇಷ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ರಾಷ್ಟ್ರಸಂತ ತರುಣ್ ಸಾಗರ್ ಮುನಿಮಹಾರಾಜ್ ಅವರಿಗೆ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಬಿ. ಗಣೇಶ್ ರಾವ್, ಸಂಚಾಲಕ ಸಂತೋಷ್ ಕುಮಾರ್, ಪದಾಧಿಕಾರಿಗಳು ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು. ಕಲಾವಿದ ಕೆ. ವಿ. ರಮಣ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *