ಮೂಡುಬಿದಿರೆ: ಪ್ರತಿ ಮಕ್ಕಳಲ್ಲೂ ಪ್ರತಿಭೆಗಳಿರುತ್ತವೆ. ಅದನ್ನು ಗುರುತಿಸಿ ಸೂಕ್ತ ವೇದಿಕೆಯನ್ನು ಕಲ್ಪಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಪುರಸಭಾ ಸದಸ್ಯ, ಮರಿಯಾಡಿ ಅಂಗನವಾಡಿ ಶಾಲೆಯ ಬಾಲ ವಿಕಾಸ ಕೇಂದ್ರದ ಅಧ್ಯಕ್ಷ ರಾಜೇಶ್ ಕೋಟೆಗಾರ್ ಹೇಳಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡ್ಯೋಡಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ನಡೆದ ಮರಿಯಾಡಿ ಅಂಗನವಾಡಿ ಶಾಲಾ ಮಕ್ಕಳ ಮುದ್ದು ಕೃಷ್ಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

muddu krishna 1

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರತಿ ಶೆಟ್ಟಿ, ನಡ್ಯೋಡಿ ಶಾಲಾಭಿಮಾನಿಗಳ ಸಂಘದ ಅಧ್ಯಕ್ಷ ಎಂ. ಪುರುಷೋತ್ತಮ ಶೆಟ್ಟಿ, ಕಾರ್ಯದರ್ಶಿ ವಿಶ್ವನಾಥ ಕೋಟ್ಯಾನ್, ನಡ್ಯೋಡಿ ದೈವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಧರ್ಣಪ್ಪ ಕೋಟ್ಯಾನ್, ನಡ್ಯೋಡಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹರಿಣಾಕ್ಷಿ ಹೆಚ್. ಪೂಜಾರಿ, ಶಾಲಾ ಮುಖ್ಯ ಶಿಕ್ಷಕಿ ಮೀನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
ಅಂಗನವಾಡಿ ಶಿಕ್ಷಕಿ ಹೇಮಾವತಿ ಆರ್. ಪೂಜಾರಿ ಸ್ವಾಗತಿಸಿದರು. ಪತ್ರಕರ್ತ ಪ್ರಸನ್ನ ಹೆಗ್ಡೆ ನಿರೂಪಿಸಿದರು.
ಸ್ಪರ್ಧಾ ವಿಜೇತರು:ಮುದ್ದುಕೃಷ್ಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರಗಳು
0-3 ವರ್ಷದೊಳಗಿನ ವಿಭಾಗದಲ್ಲಿ ಗಾಹ್ನವಿ ಪ್ರಥಮ, ರಿಶಾನ್ ಡಿ. ಅಮೀನ್ ದ್ವಿತೀಯ
3ರಿಂದ 5 ವರ್ಷದೊಳಗಿನ ವಿಭಾಗದಲ್ಲಿ ಆದಿತ್ಯ ಪ್ರಥಮ, ಶರಣ್ಯ ದ್ವಿತೀಯ ವಿಜೇತರಾಗಿದ್ದಾರೆ.

By suddi9

Leave a Reply

Your email address will not be published. Required fields are marked *