ಮೂಡುಬಿದಿರೆ,: ಮಂಗಳೂರು ವಿಶ್ವವಿದ್ಯಾಲಯ ಬಿ.ಇಡಿ ವಿಭಾಗದ ಅಂತರ್ ಕಾಲೇಜು ಮಟ್ಟದ “ಎಜು ತರಂಗ್-2018” ಸಾಂಸ್ಕøತಿಕ ಹಾಗೂ ಸಾಹಿತ್ಯಿಕ ಸ್ಪರ್ಧೆಯು ಮಂಗಳೂರಿನ ಅಂತ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಲ್ಪಟ್ಟಿದ್ದು ಸೆ.2ರಂದು ನಡೆದಿದ್ದು, ಆಳ್ವಾಸ್ ಶಿಕ್ಷಣ ಕಾಲೇಜು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

alvas B (1)

ವೈಯುಕ್ತಿಕ ಸ್ಪರ್ಧೆಗಳಾದ ಕವನ ರಚನೆಯಲ್ಲಿ ದೀವಿತ್ ಶ್ರೀಧರ್ ಕೋಟ್ಯಾನ್, ಪ್ರಥಮ(ಕನ್ನಡ) ,ಅನುಪಮ, ಪ್ರಥಮ (ಇಂಗ್ಲೀಷ್), ಫ್ಲವರ್ ಅರೇಂಜ್ ಮೆಂಟ್ ವಿಭಾಗದಲ್ಲಿ ಮೇರಿ ಜೋಸೆಫ್ ಜಿನ್ ಪ್ರಥಮ, ಏಕಪಾತ್ರಾಭಿನಯದಲ್ಲಿ ದೀವಿತ್ ಶ್ರೀಧರ್ ಕೋಟ್ಯಾನ್ ದ್ವಿತೀಯ, ಸಮೂಹ ಸ್ಪರ್ಧೆಗಳಾದ ಸಮೂಹ ಗಾಯನ (ಈಸ್ಟರ್ನ್ ಮತ್ತು ವೆಸ್ಟರ್ನ್) ಪ್ರಥಮ, ಸಮೂಹ ನೃತ್ಯ ವಿಭಾಗದಲ್ಲಿ ಪ್ರಥಮ, ಮೈಮ್ ಶೋ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

alvas B (2)

alvas B (3)
ಒಟ್ಟು 180 ಅಂಕಗಳನ್ನು ಗಳಿಸುವುದರ ಮೂಲಕ ಆಳ್ವಾಸ್ ಸಂಸ್ಥೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಳ್ಳುವುದರ ಜೊತೆಗೆ ವೈಯುಕ್ತಿಕ ಸಮಗ್ರ ಪ್ರಶಸ್ತಿಯನ್ನು ದೀವಿತ್ ಶ್ರೀಧರ್ ಕೋಟ್ಯಾನ್ ತನ್ನದಾಗಿಸಿಕೊಂಡಿದ್ದಾರೆ. ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *