ಹೆಬ್ರಿ : ಸಹಕಾರಿ ಕ್ಷೇತ್ರದ ಅತ್ಯುತ್ತಮ ಸಾಧನೆ ಮತ್ತು ದಕ್ಷ ಆಡಳಿತಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ನೀಡುವ ಪ್ರೋತ್ಸಾಹಕ ಪ್ರಶಸ್ತಿಯು ವರಂಗ ಸಹಕಾರಿ ವ್ಯವಸಾಯಿಕ ಸಂಘಕ್ಕೆ ದೊರೆತಿದೆ.

hebri-prashasthi
ಮಂಗಳೂರಿನಲ್ಲಿ ಸಂಘದ ಅಧ್ಯಕ್ಷ ಮುನಿಯಾಲು ರವಿ ಪೂಜಾರಿ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಗೋಪಾಲಕೃಷ್ಣ ಪೈ ಅವರಿಗೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಆಶಾ ಶೆಟ್ಟಿ, ನಿರ್ದೆಶಕರಾದ ಗುಂಡಾಳ ಸದಾಶಿವ ಶೆಟ್ಟಿ, ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಪಡುಕುಡೂರು ಜಗದೀಶ ಹೆಗ್ಡೆ, ಸಂಘದ ಮೇಲ್ವಿಚಾರಕ ಜಯಂತ್ ಕುಮಾರ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *