ಮೂಡಬಿದಿರೆ: ಪಕ್ಷಿಗಳ ನಿನಾದ ಕೇಳಿ ಪುಳಕಿತರಾಗುವ ನಾವು ಅವುಗಳ ಉಳಿವಿಗೆ ಶ್ರಮಪಡಬೇಕು. ಅವುಗಳ ಉಳಿವಿಗಾಗಿ ಬೇಕಾದ ಎಲ್ಲಾ ಪ್ರಯತ್ನವನ್ನು ಮಾಡಬೇಕು. ಪಕ್ಷಿಗಳಿಗೆ ಆವಾಸ ಸ್ಥಾನ ನೀಡಿ ಅವುಗಳಿಗೆ ಬೇಕಾದ ಪೂರಕ ವಾತಾವರಣ ನೀಡಿ ಪಕ್ಷಿ ಪ್ರೇಮಿಗಳಾಗಬೇಕು ಎಂದು ನಿತ್ಯಾನಂದ ಶೆಟ್ಟಿ ಬದ್ಯಾರು ಹೇಳಿದರು.

gubbacchigoodu (2)

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಂಡೇಲು ಇಲ್ಲಿ ಗುಬ್ಬಚ್ಚಿಗೂಡು ಅಳಿವಿನಂಚಿನಲ್ಲಿರುವ ಪಕ್ಷಿಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

gubbacchigoodu (1)

ಗುಬ್ಬಚ್ಚಿಗೂಡಿನ ರಮ್ಯ ಮಾತನಾಡಿ,ಪಕ್ಷಿಗಳು ಆಕರ್ಷಿತವಾಗುವುದು ಹಸಿರಿನ ಚಿಗುರಿಗೆ ಆದುದರಿಂದ ಹಣ್ಣು, ಹೂ ಬಿಡುವ ಗಿಡ ನೆಟ್ಟು ಹಸಿರಿನ ಚಿಗುರು ಹೆಚ್ಚಿಸಬೇಕು. ಆಗ ಪಕ್ಷಿಗಳು ಅಂತಹ ವಾತವರಣದಲ್ಲಿ ಜೀವಿಸಲು ಅನುಕೂಲವಾಗುತ್ತದೆ. ಅವುಗಳಿಗೆ ಬೆಕಾಗುವಂತಹ ಗಿಡಗಳನ್ನು ನೆಡುವುದರಿಂದ ಅವುಗಳ ಉಳಿವು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ.ವಿನ್ನಿ.ಜೆ.ಪಿಂಟೊ ಹಾಗೂ ಸಹ ಶಿಕ್ಷಕರಾದ ದೊರೆಸ್ವಾಮಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಇಡುವ ಪಾತ್ರೆಯನ್ನು ಉಚಿತವಾಗಿ ನೀಡಿ ಪ್ರಾತ್ಯಕ್ಷಿಕೆ ನಡೆಸಲಾಯಿತು.

By suddi9

Leave a Reply

Your email address will not be published. Required fields are marked *