ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ಪದವಿ ಕಾಲೇಜಿನಲ್ಲಿ ಎನ್ ಐಟಿಐ ಮತ್ತು ಕೇಂದ್ರ ಸರ್ಕಾರದ ಅಟಲ್ ಇನ್ನೋವೇಶನ್ ವಿಷನ್ ಸಂಯುಕ್ತ ಆಶ್ರಯದಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯವನ್ನು ಎನ್‍ಐಟಿಕೆ ಸುರತ್ಕಲ್ ರಸಾಯನ ಶಾಸ್ತ್ರ ವಿಭಾಗದ ಪ್ರೋಫೆಸರ್ ಹಾಗೂ ಮುಖ್ಯಸ್ಥರಾದ ಅರುನ್ ಕುಮಾರ್ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಟಲ್ ಟಿಂಕರಿಂಗ್ ಪ್ರಯೋಗಾಲಯದ ಉದ್ದೇಶ ಆರರಿಂದ ಹನ್ನೆರಡನೇ ತರಗತಿಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಕಲ್ಪನೆಯನ್ನು ಸೃಷ್ಟಿಸುವುದು ಮತ್ತು ಚಿಂತನೆಯ ಮಟ್ಟವನ್ನು ಹೆಚ್ಚಿಸುವುದು. ವಿದ್ಯಾರ್ಥಿಗಳಿಗೆ ಏಕೆ ಮತ್ತು ಹೇಗೆ ಎಂದು ಸಂಬಂಧಿಸಿದ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸುವಲ್ಲಿ ಈ ಪ್ರಯೋಗಾಲಯ ಸಹಾಯ ಮಾಡುತ್ತದೆ ಎಂದು ಹೇಳಿದರು.
ಚೀನಾ, ಅಮೇರಿಕ ಮತ್ತು ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಹೋಲಿಸಿದಾಗ ಭಾರತವು ವೈಜ್ಞಾನಿಕ ಆವಿಷ್ಕಾರದಲ್ಲಿ ಹಿಂದೆ ಇದೆ. ಆದ್ದರಿಂದ ಭಾರತ ಸರ್ಕಾರವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸಮನಾಗಿ ಅಭಿವೃದ್ಧಿ ಹೊಂದಲು ವಿದ್ಯಾರ್ಥಿಗಳ ನಡುವೆ ವೈಜ್ಞಾನಿಕ ಮನೋಧರ್ಮವನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಅಟಲ್ ಟಿಂಕರಿಂಗ್ ಪ್ರಯೋಗಾಲಯವು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದ್ದು, ವಿದ್ಯಾರ್ಥಿಗಳಿಗಳಲ್ಲಿ ನೂತನ ಆಲೋಚನೆಗಳನ್ನು ಪೋಷಿಸುವ ನಿಟ್ಟಿನಲ್ಲಿ “ನೀತಿ“ ಆಯೋಗದ ಅಟಲ್ ಇನೋವೇಶನ್ ಈ ಯೋಜನೆಯನ್ನು ಪ್ರಾಯೋಜಿಸಿದೆ. ಅಟಲ್ ಟಿಂಕರಿಂಗ್ ಪ್ರಯೋಗಾಲಯ ಸ್ಥಾಪನೆಯ ವೆಚ್ಚವನ್ನು ಒಳಗೊಂಡಿರುವ ಹತ್ತು ಲಕ್ಷ ರೂಪಾಯಿಗಳ ಅನುದಾನ ಒದಗಿಸುತ್ತದೆ. ಪ್ರತಿ ಏಐಎ0ಗೆ ಗರಿಷ್ಠ ಐದು ವರ್ಷಗಳವರೆಗೆ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಉತ್ತೇಜಿಸಲು, ನೀತಿ ಆಯೋಗ ಐದು ಸಾವಿರ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳನ್ನು ಮಾರ್ಚ್ 2019ರೊಳಗೆ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸುವ ಉದ್ದೇಶವಿದೆ.
ಪುಣೆಯ ಐಐಎಸ್‍ಎಸ್‍ರ್‍ನ ಭೌತಶಾಸ್ತ್ರ ಇಲಾಖೆಯ ಸಹಾಯಕ ಪ್ರಾಧ್ಯಾಪಕ ಮಹೇಶ್ ಟಿ ಎಸ್ತಮ್ಮ ದಿಕ್ಸೂಚಿ ಭಾಷಣದಲ್ಲಿ ಶಿಕ್ಷಕರು ಅವರ ಮೇಲೆ ಪ್ರಭಾವ ಬೀರಿದ್ದ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡರು. ಅವರು ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಚಿಂತಿಸುವುದನ್ನು ಬಿಟ್ಟು ವಿದ್ಯಾಭ್ಯಾಸದ ಕಡೆಗೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಲು ಸಲಹೆ ನೀಡಿದರು. ಹಾಗೆಯೇ ಸಾಂಪ್ರದಾಯಿಕ ಶಿಕ್ಷಣವನ್ನು ಹೊರತು ಪಡಿಸಿ ಇತರ ಅವಕಾಶಗಳತ್ತ ಮುಖ ಮಾಡುವ0ತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿಜ್ಞಾನ ವಿಷಯದಲ್ಲಿ ಭಾರತದಲ್ಲಿ ಸಮಗ್ರ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ನೀಡುವ ಅನೇಕ ಸಂಶೋಧನಾ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಿದರು, ಅಲ್ಲಿ ಅಂತಿಮ ವರ್ಷವು ವಿದ್ಯಾರ್ಥಿಗಳಿಗೆ ಕೇವಲ ಸಂಶೋಧನೆಗೆ ಮೀಸಲಾಗಿದ್ದು ಡಾಕ್ಟರೇಟ್ ಪದವಿ ನಡೆಸಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆ ಎ0ದರು.
ಮುಖ್ಯ ಅತಿಥಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಎಂ ಎಲ್ ಸಿ ಮತ್ತು ಕರ್ನಾಟಕ ಸರ್ಕಾರದ ಪ್ರತಿಪಕ್ಷದ ಮುಖ್ಯ ಸಚೇತಕರು ಮಾತನಾಡಿ, ಅಟಲ್ ಟಿಂಕರಿಂಗ್ ಪ್ರಯೋಗಾಲಯ, ಹೆಸರೇ ಸೂಚಿಸುವ0ತೆ ಯುವಮನಸ್ಸನ್ನು ಪ್ರಚೋದಿಸುವ ಕೆಲಸ ಮಾಡುತ್ತದೆ . ವೈಜ್ಞಾನಿಕ ಅನ್ವೇಷಣೆಗೆ ಬಂದಾಗ ಪ್ರಸ್ತುತ ಶೈಕ್ಷಣಿಕ ಸನ್ನಿವೇಶದಲ್ಲಿ ಒ0ದು ಮಿತಿ ಇದೆ. ವಿಜ್ಞಾನ ಕ್ಷೇತ್ರದಲ್ಲಿ ಭಾರತವು ದೊಡ್ಡ ಸಾಧನೆಯನ್ನು ಮಾಡಬೇಕಾದರೆ, ಯುವಪೀಳಿಗೆ ವಿಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕು ಮತ್ತು ವಿದ್ಯಾರ್ಥಿಗಳ ಪ್ರಶ್ನಿಸುವ ಮನೋಭಾವ ಹತ್ತಿಕ್ಕದ0ತೆ ಶಿಕ್ಷಕರಿಗೆ ಮನವಿ ಮಾಡಿದರು.
ವಿವೇಕಾನಂದ ಕಾಲೇಜು ಪುತ್ತೂರಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಹರಿಶಾಸ್ತ್ರಿ ಮಾತನಾಡಿ ನಮಗೆ ಅನೇಕ ಗುರುಗಳಿದ್ದು ನಮ್ಮ ತಾಯಿ ನಮ್ಮ ಮೊದಲ ಗುರುವಾಗಿರುತ್ತಾರೆ. ಆದರೆ ಪ್ರಕೃತಿ ಅತ್ಯುತ್ತಮ ಗುರು ಮತ್ತು ನಮಗೆ ಕಠಿಣ ರೀತಿಯಲ್ಲಿ ಪಾಠ ಕಲಿಸುತ್ತದೆ. ಪಠ್ಯಪುಸ್ತಕಗಳಿಂದ ನಮ್ಮ ಕಲಿಕೆ ಸೀಮಿತವಾಗಿದೆ. ಜ್ಞಾನವನ್ನು ಹೊಂದಲು ನಾವು ಪ್ರಕೃತಿಯಿಂದ ಕಲಿಯಬೇಕಾಗಿದೆ. ಇರುವೆಯಿ0ದ ಆನೆಯವರೆಗೆ ಪ್ರಕೃತಿಯ ಪ್ರತಿಯೊಂದು ಅಂಶವು ಕಲಿಸುತ್ತದೆ,. ಹಾಗೆಯೇ ಅನೇಕ ಅನ್ವೇಷಣೆಗಳು ಪ್ರಕೃತಿಯಿ0ದಲೇ ಪ್ರೇರಣೆ ಪಡೆದದ್ದು ಎ0ದು ಉದಾಹರಣೆಗಳ ಮೂಲಕ ವಿವರಿಸಿದರು .
ಈ ಸ0ದರ್ಭದಲ್ಲಿ ಎರಡು ದಿನಗಳ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು ಐದು ಪ್ರಾಜೆಕ್ಟುಗಳನ್ನು ಮಾಡಿ ಅತಿಥಿಗಳ ಎದುರು ಪ್ರದರ್ಶಿಸಿದರು.
ಈಸ0ದರ್ಭದಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ಸ0ಯೋಜಕ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಎಕ್ಸಲೆಂಟ್ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಗುರುಪ್ರಸಾದ ಶೆಟ್ಟಿ ಸ್ವಾಗತಿಸಿದರು. ಸ0ಯೋಜಕರಾದ ಲಕ್ಷ್ಮಿ ನಾರಾಯಣ ಮತ್ತು ಜಯ ಶೀಲ ವ0ದಿಸಿದರು ನಾಜಿಯ ಸುಮೆನ ಕಾರ್ಯಕ್ರಮನಿರೂಪಿಸಿದರು.

