ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗವು ಹಮ್ಮಿಕೊಂಡಿದ್ದ ವಿಭಾಗದ ಚಟುವಟಿಕೆಗಳನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

MSW club (2)
ನಾಯಕತ್ವದ ಗುಣ ಹಾಗೂ ಪ್ರೇರಣೆಯ ಅಂಶಗಳ ಕುರಿತು ಮಾತನಾಡಿದರು. ಶಿಕ್ಷಣ ನಮ್ಮಲ್ಲಿ ಒಂದು ಹೊಸ ಬಗೆಯ ಚಿಂತನೆಯನ್ನು ಬಿತ್ತುವಲ್ಲಿ ಸಹಕಾರಿಯಾಗಬೇಕು. ಉತ್ತಮ ಕೌಶಲ್ಯವನ್ನು ಬೆಳೆಸಿ ಯಶಸ್ಸಿನೆಡೆಗೆ ಕ್ರಮಿಸಲು ಪೂರಕ ವಾತವರಣವನ್ನು ನಿರ್ಮಿಸಿಕೊಡುವಂತಹ ಶಿಕ್ಷಣದ ಅಗತ್ಯವಿದೆ ಎಂದು ತಿಳಿಸಿದರು.

MSW club (3)
ಯುವಶಕ್ತಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ತಮ್ಮನ್ನು ತಾವು ನಾಯಕರೆಂದು ಅರಿತು ಕಾರ್ಯಪ್ರವೃತ್ತರಾದಾಗ ಮಾತ್ರ ಅದು ಸಾಧ್ಯ ಎಂದರು. ರ್ಯಾಂಕ್ ಪದ್ದತಿ ವಿದ್ಯಾರ್ಥಿಗಳ ಚಿಂತನಾ ಶೈಲಿಯನ್ನು ವಿಮುಕ್ತಗೊಳಿಸುವುದರಿಂದ, ಸಮಾಜ ಕಾರ್ಯ ವಿದ್ಯಾರ್ಥಿಗಳು ಅಂಕಕ್ಕೆ ಮಾರು ಹೋಗದ ಕೌಶಲ್ಯ, ಮೌಲ್ಯ, ಶಿಸ್ತಿನ ಜೀವನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂದರು.

MSW club (1)
ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ಗುರಿ ಸಾಧಿಸಲು ನಿರಂತರ ತುಡಿತ, ಧೈರ್ಯ, ಆತ್ಮಸ್ಥೆರ್ಯ, ಭರವಸೆಗಳನ್ನೆ ಅಸ್ತ್ರವನ್ನಾಗಿಸಿಕೊಳ್ಳಬೇಕು. ಒತ್ತಾಯ ಪೂರ್ವಕವಾಗಿ ಶಿಕ್ಷಣ ಪಡೆಯದೆ, ನಮ್ಮ ಪೋಷಕರು ದಿನನಿತ್ಯ ಪಡುವ ಕಷ್ಟಗಳನ್ನು ಮನಗಂಡು ಜೀವನದಲ್ಲಿ ಶ್ರಮಿಸಬೇಕು. ಜೀವನ ಅನ್ನೋದು ಸುಂದರ ಪಯಣ ಅದು ಜ್ಞಾನ, ತೃಪ್ತಿ ಹಾಗೂ ಯಶಸ್ಸು ಈ ಮೂರರಲ್ಲಿ ಅಡಕವಾಗಿದೆ. ನಮ್ಮನ್ನು ನಾವು ಗೌರವಿಸುದರ ಜೊತೆಗೆ ರಾಷ್ಟ್ರ ಭಕ್ತಿಯನ್ನು ಬೆಳಸಿಕೊಳ್ಳುವುದು ಅವಶ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ಕುರಿಯನ್, ವಿಭಾಗದ ಮುಖ್ಯಸ್ಥ ರವಿಚಂದ್ರನ್ ನಾಯರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದ್ವಿತೀಯ ಎಮ್.ಎಸ್.ಡಬ್ಲ್ಯೂ ಸನ್ನಿಧಿ ನಿರೂಪಿಸಿ, ಚರಣ್ ಸ್ವಾಗತಿಸಿ, ಅಂಕಿತಾ ವಂದಿಸಿದರು.

By Suddi9

Leave a Reply

Your email address will not be published. Required fields are marked *