ಮಂಗಳೂರು: ಕೆನರಾ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಎಸ್‍ಎಇ ಇಂಡಿಯಾ ಕೊಲೆಜಿಯೇಟ್ ಕ್ಲಬ್‍ನ ಉದ್ಘಾಟನೆ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಕಳೆದ ಆ.27 ಸೋಮವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಪಿಎಬಿಎಸ್ ಕನ್ಸಲ್ಟೆಂಟ್ ಅನೂಪ್ ಬಿ.ಎಸ್ ಹಾಗೂ ಎಸ್‍ಎಇ ಇಂಡಿಯಾ ಬೆಂಗಳೂರು ವಿಭಾಗದ ರಾಕೇಶ್ ಡಿ.ಆರ್ ಅತಿಥಿಗಳಾಗಿದ್ದರು.
ಎಸ್‍ಎಇ ಇಂಡಿಯಾದ ವೈವಿಧ್ಯಮಯ ವಿಭಾಗಗಳ ಕುರಿತು ಅನೂಪ್ ಬಿ.ಎಸ್ ಸವಿವರ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಗಣೇಶ್ ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ. ಬಿ.ಕೃಷ್ಣ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಿದ್ಯಾರ್ಥಿ ಚೇತನ್ ಅಡಪ ಕಾಲೇಜಿನ ಎಸ್‍ಎಇ ಕ್ಲಬ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥೆ ಡಾ.ರಾಜಲಕ್ಷ್ಮೀ ಸಾಮಗ, ಇಲೆಕ್ಟ್ರಿಕಲ್ ವಿಭಾಗ ಮುಖ್ಯಸ್ಥ ಮೋಹನ್ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕ್ಲಬ್‍ನ ಸಲಹೆಗಾರ ವಿಜೇತ್ ಪಿ.ಎಸ್, ಗೋಪಾಲ್ ಪೈ ವಿಶ್ವನಾಥ ಭಟ್ ನಿರೂಪಿಸಿ, ಸಂಕೇತ್ ವಂದಿಸಿದರು.

