ಮಂಗಳೂರು:ಯಕ್ಷಗಾನ ಹಿಮ್ಮೇಳ ಗುರು, ಹಿರಿಯ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಶಿಷ್ಯವೃಂದದ ಸ್ನೇಹ ಸಮಾವೇಶ ನವೆಂಬರ್ 4ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸ್ನೇಹ ಸಮಾವೇಶದ ಸಮಿತಿಯೊಂದನ್ನು ರಚಿಸಲಾಗಿದೆ.MAMBADY SUBRAHMANYA BHAT

ಅಧ್ಯಕ್ಷರಾಗಿ ಹರಿಕೃಷ್ಣ ಪುನರೂರು, ಉಪಾಧ್ಯಕ್ಷರಾಗಿ ವಿಶ್ವವಿನೋದ ಬನಾರಿ, ಜಿ.ಕೆ.ನಾವಡ ಬಾಯಾರು, ಪಟ್ಲ ಸತೀಶ ಶೆಟ್ಟಿ, ರಮೇಶ್ ಟಿ.ಎನ್. ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕಾರ್ಯದರ್ಶಿಗಳಾಗಿ ಹರೀಶ ಬೊಳಂತಿಮೊಗರು ಮತ್ತು ಎಸ್.ಎನ್. ಭಟ್ ನೇಮಕಗೊಂಡಿದ್ದಾರೆ. ಖಜಾಂಚಿಯಾಗಿ ಮಧುಸೂಧನ ಅಲೆವೂರಾಯ, ಜೊತೆ ಖಜಾಂಚಿಯಾಗಿ ಕಿಶೋರ್ ಕೊಮ್ಮೆ, ಜೊತೆ ಕಾರ್ಯದರ್ಶಿಗಳಾಗಿ ಸತೀಶ ಶೆಟ್ಟಿ ಬೋಂದೆಲ್, ಅಂಡಾಲ ದೇವಿಪ್ರಸಾದ ಶೆಟ್ಟಿ, ನೆಕ್ಕರೆಮೂಲೆ ಗಣೇಶ ಭಟ್, ಪೆರುವೋಡಿ ಸುಬ್ರಹ್ಮಣ್ಯ ಭಟ್, ಕೆ.ಪಿ.ಪ್ರಸಾದ ಹೊಳ್ಳ, ಸುಧಾಕರ ಸಾಲಿಯಾನ, ಕೋಳ್ಯೂರು ಭಾಸ್ಕರ, ನಿಡುವಜೆ ಪುರುಷೋತ್ತಮ ಭಟ್ ಆಯ್ಕೆಗೊಂಡರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಫುಲ್ಲಚಂದ್ರ ನೆಲ್ಯಾಡಿ, ವಿಶ್ವರಾಜ್, ದಿನೇಶ್ ಮಾಮೇಶ್ವರ, ರಾಜೇಂದ್ರ ಶೆಟ್ಟಿಗಾರ್, ಕಾವ್ಯಶ್ರೀ ಅಜೇರು, ಸುಮಂಗಲಾ ರತ್ನಾಕರ್, ಡಾ. ಸುಬ್ರಹ್ಮಣ್ಯ ಭಟ್, ಹರೀಶ ಮಾಂಬಾಡಿ, ಚಣಿಲ ಸುಬ್ರಹ್ಮಣ್ಯ ಭಟ್, ತಲ್ಪನಾಜೆ ವೆಂಕಟರಮಣ ಭಟ್ ಆಯ್ಕೆಗೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *