ಬಂಟ್ವಾಳ: ಬಂಟ್ವಾಳ ತಾಲೂಕಿನ ಮೊಡಂಕಾಪು ಮನೆಯೊಂದರಲ್ಲಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ನರು ಆರೋಪಿ ಗಳ ಪೈಕಿ ಓರ್ವ ನನ್ನು ಬಂಟ್ವಾಳ ನಗರ ಠಾಣಾ ಪೋಲಿಸರು ಬಂಧಿಸಿ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಕನಕಬೇಳೂರು ನಿವಾಸಿ ಮುಂಡಪ್ಪ ಗೌಡ ಅವರ ಮಗ ಪ್ರವೀಣ್ ಕೆ ,( 31) ಹೊಸನಗರ ಶಿವಮೊಗ್ಗ ಜಿಲ್ಲೆಯ ಕನಕಬೇಳೂರು ನಿವಾಸಿಯಾಗಿದ್ದಾನೆ. ಅಗಸ್ಟ್ 8 ರಂದು ಬಂಟ್ವಾಳ ತಾಲೂಕಿನ ಮೊಡಂಕಾಪು ನಿವಾಸಿ ಜನಾರ್ದನ ಹೊಳ್ಳ ಅವರ ಮನೆಗೆ ನುಗ್ಗಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣ್ ನನ್ನು ಬಂಧಿಸಿದ್ದಾರೆ.
ಈಗಾಗಲೇ ಬಂಧಿತ ಆರೋಪಿ ಬೆಂಗಳೂರು ಉಪ್ಪಾರಪೇಟೆ ಠಾಣೆಯಲ್ಲಿ ಮೂರು ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಅಗಸ್ಟ್ 8 ರಂದು ರಾತ್ರಿ ,9.30 ಸಮಯದಲ್ಲಿ ಜನಾರ್ದನ ಹೊಳ್ಳ ಅವರ ಮನೆಗೆ ಇಬ್ಬರು ಅಪರಿಚಿತರು ನುಗ್ಗಿ ಜನಾರ್ದನ ಅವರ ತಲೆಗೆ ಹೊಡೆದು ಅವರ ಕುತ್ತಿಗೆಯ ಲ್ಲಿದ್ದ 75000 ಮೌಲ್ಯದ ಸರವನ್ನುಕಳ್ಳತನ ಮಾಡಿದ್ದಾರೆ.
ತಲೆಗೆ ಗಂಭೀರ ಗಾಯಗೊಂಡ ಜನಾರ್ದನ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲುಮಾಡಲಾಗಿತ್ತು.
ಜಿಲ್ಲಾ ಎಸ್.ಪಿ.ರವಿಕಾಂತೇ ಗೌಡ, ಅಡಿಸನಲ್ ಎಸ್.ಪಿ.ಸಜಿತ್ ನಿರ್ದೇಶನ ದಲ್ಲಿ, ಬಂಟ್ವಾಳ ಎ.ಎಸ್.ಪಿ.ಹ್ರಷಿಕೇಶ್ ಸೋನಾವಣೆ ಅವರ ಮಾರ್ಗದರ್ಶನ ದಲ್ಲಿ, ಬಂಟ್ವಾಳ ವ್ರತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ನೇತ್ರತ್ವದಲ್ಲಿ ಬಂಟ್ವಾಳ ಎಸ್.ಐ.ಚಂದ್ರಶೇಖರ್, ಅಪರಾಧ ವಿಭಾಗದ ಎಸ್.ಐ.ಹರೀಶ್ , ಎ.ಎಸ್.ಐ. ಸಂಜೀವ ಕೆ ಸಿಬ್ಬಂದಿ ಗಳಾದ ಸುರೇಶ್ ಪಡಾರ್, ಅಬ್ದುಲ್ ಕರೀಂ, ಗಿರೀಶ್, ಯೋಗೀಶ್, ಮಲಿಕ್, ಕುಮಾರ್, ಉಮೇಶ್, ವಿವೇಕ್ ರೈ ಕಾರ್ಯಚರನೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದಾರೆ.

