ಮೂಡಬಿದಿರೆ: ರಾಸಯನಶಾಸ್ತ್ರಜ್ಞರು ತಮ್ಮ ವೃತ್ತಿಯಲ್ಲಿ ನೈತಿಕತೆ ಅಳವಡಿಸಿಕೊಳ್ಳವುದು ಪ್ರಸಕ್ತ ಸನ್ನಿವೇಶದಲ್ಲಿ ಬಹಳ ಅಗತ್ಯವಾಗಿದೆ ಎಂದು ಉಜಿರೆ ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜಿನ ರಾಸಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್ ಸಂಶುದ್ಧಿನ್ ಹೇಳಿದರು.

chem varn (3)
ಆಳ್ವಾಸ್ ಕಾಲೇಜಿನ ಸ್ನಾತಕೋತರ ರಾಸಯನಶಾಸ್ತ್ರ ವಿಭಾಗವು ಅಯೋಜಿಸಿದ್ದ ಕೆಮ್‍ವರ್ಣ ಫೋರಂ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ರಾಸಯನಶಾಸ್ತ್ರದ ಅನ್ವೇಷಣೆಗಳು ದುರ್ಬಳಕೆಯಾಗುತ್ತಿದೆ. ಸಮಾಜದ ಕಂಟಕಗಳಾದ ಅಣುಬಾಂಬ್, ಡ್ರಗ್ ಮಾಫಿಯ ಇಮ್ಮುಡಿಕೊಳ್ಳುತ್ತಿರುವುದು ಈ ಬೆಳವಣಿಗೆ ಉದಾಹರಣೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶೈಕಣಿಕ ಪರಿಸರದಿಂದಲೇ ತಮ್ಮ ಜೀವನದಲ್ಲಿ ಮತ್ತು ವೃತ್ತಿಯಲ್ಲಿ ನೈತಿಕತೆ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

chem varn (3)

ಕೆಮ್‍ವರ್ಣ ವಿದ್ಯಾರ್ಥಿಗಳ ಯೋಜನೆಗಳನ್ನು ಅಭಿವೃದ್ಧಿ ಪಡಿಸಲು ಉತ್ತಮ ವೇದಿಕೆ ಅದನ್ನು ನೀವು ಉತ್ತಮ ರೀತಿಯಲ್ಲಿ ಬಳಸಿಕೊಂಡು ಹೊಸ ಹೊಸ ವಿಚಾರಗಳನ್ನು ಕಲಿತುಕೊಳಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದರು.

chem varn (1)

ಆಳ್ವಾಸ್ ಕಾಲೇಜಿನ ರಾಸಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ.ರಾಜ್‍ಕುಮಾರ್ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಆದರೆ ಅದನ್ನು ಹೊರಸೂಸಲು ಸರಿಯಾದ ಅವಕಾಶ ದೊರೆಯುವುದಿಲ್ಲ. ಕೆಮ್ ವರ್ಣ ಅಂತಹ ಪ್ರತಿಭೆಗಳನ್ನು ತೋರುಪಡಿಸಲು ಉತ್ತಮವಾದ ವೇದಿಕೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಮ್‍ವರ್ಣನ ಫೋರಂನ ಸಂಯೋಜಕಿ ಚಾರಿಶ್ಮ, ಸ್ನಾತಕೊತ್ತರ ರಾಸಯನಶಾಸ್ತ್ರದ ವಿಭಾಗದ ಸಂಯೋಜಕಿ ಡಾ. ಶೃತಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಭಾಗ್ಯ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *