ಕೈಕಂಬ: ಕಂದಾವರ ಗ್ರಾಮ ಪಂಚಾಯತ್‍ಗೆ ಒಳಪಟ್ಟಿರುವ ಅಂಗಡಿಗಳ ಬಾಡಿಗೆ ಬಾಕಿ ಉಳಿಸಿರುವವರ ವಿರುದ್ಧ ಪಂಚಾಯತ್ ಆಡಳಿತ ಸೋಮವಾರ ಕೈಕಂಬದಲ್ಲಿ ಕಾರ್ಯಾಚರಣೆ ನಡೆಸಿ, ಮೂರು ಅಂಗಡಿಗಳಿಗೆ ಬೀಗ ಜಡಿಯಿತು.
ಹಣ್ಣುಹಂಪಲು, ತರಕಾರಿ ಅಂಗಡಿ, ಒಂದು ಎಲೆಕ್ಟ್ರಾನಿಕ್ ಅಂಗಡಿಗೆ ಬೀಗ ಜಡಿಯಲಾಯಿತು. ಕಾನೂನು ಉಲ್ಲಂಘಿಸಿದ ಅಂಗಡಿ ಮಾಲಕರ ವಿರುದ್ಧ ಕ್ರಮಕ್ಕೆ ಪಂಚಾಯತಿನಲ್ಲಿ ನಡೆದಿದ್ದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎಂದರು.
ಬಾಕಿ ಉಳಿಸಲಾಗಿರುವ ಬಾಡಿಗೆ ಪಾವತಿಸುವಂತೆ ಅಂಗಡಿ ಮಾಲಕರಿಗೆ ಆರು ತಿಂಗಳ ಹಿಂದಿನಿಂದಲೂ ಎಚ್ಚರಿಸುತ್ತ ಬಂದಿದ್ದೇವೆ. ನಾಲ್ಕು ಬಾರಿ ನೋಟಿಸು ಜಾರಿ ಮಾಡಿದ್ದೇವೆ. ಕೆಲವರು ಪಂಚಾಯತ್ ಆದೇಶ ಉಲ್ಲಂಘಿಸಿ ವ್ಯವಹಾರ ಮುಂದುವರಿಸಿದ್ದು, ಅಂತಹವರ ವಿರುದ್ಧ ಕಾರ್ಯಾಚರಣೆ ಇಂದು ಸೋಮವಾರ ನಡೆಸಲಾಯಿತು ಎಂದು ಪಂಚಾಯತ್ ಅಧ್ಯಕ್ಷೆ ವಿಜಯಾ ಜಿ ಸುವರ್ಣ ತಿಳಿಸಿದರು.

ಅಂಗಡಿಗಳಿಂದ ಪಂಚಾಯತಿಗೆ ಲಕ್ಷಾಂತರ ರೂ ಬಾಕಿ ಇದ್ದು, 10,000 ರೂ ಮೇಲ್ಪಟ್ಟು ಬಾಕಿ ಉಳಿಸಿದವರಿಗೆ ನೋಟಿಸು ಜಾರಿ ಮಾಡಲಾಗಿತ್ತು. ಕೆಲವರು ಇಂದು ಕಾರ್ಯಾಚರಣೆ ನಡೆಯುತ್ತಿದ್ದಂತೆ ಪಂಚಾಯತಿಗೆ ತೆರಳಿ ಬಾಕಿ ಮೊತ್ತ ಪಾವತಿಸಿದರು. ಸದ್ಯ ಬೀಗ ಹಾಕಲಾದ ಮೂರು ಅಂಗಡಿಗಯವರು ಮುಂದಿನ ಏಳು ದಿನದೊಳಗೆ ಬಾಕಿ ಮೊತ್ತ ಪಾವತಿಸಿದರೆ, ಅಂತಹ ಅಂಗಡಿಗಳನ್ನು ಏಲಂ ಮಾಡುವುದಿಲ್ಲ ಎಂಬ ಭರವಸೆ ನೀಡಿ, ನೋಟಿಸು ಹಚ್ಚಲಾಗಿದೆ ಎಂದು ಸುವರ್ಣ ಹೇಳಿದರು.
ಕೋಟ್…
“ಕೆಲವರು ಪಂಚಾಯತ್ ಆದೇಶ ಉಲ್ಲಂಘಿಸಿ ವ್ಯವಹಾರ ಮುಂದುವರಿಸಿದ್ದು, ಅಂತಹವರ ವಿರುದ್ಧ ಕಾರ್ಯಾಚರಣೆ ನಡೆಸಲಾಯಿತು. ಏಳು ದಿನದೊಳಗೆ ಬಾಕಿ ಮೊತ್ತ ಪಾವತಿಸಿದರೆ, ಅಂತಹ ಅಂಗಡಿಗಳನ್ನು ಏಲಂ ಮಾಡುವುದಿಲ್ಲ ಎಂಬ ಭರವಸೆ ನೀಡಿ, ನೋಟಿಸು ಹಚ್ಚಲಾಗಿದೆ” ಎಂದು ವಿಜಯ ಸುವರ್ಣಗೋಪಾಲ್ ಸುವರ್ಣ ಹೇಳಿದರು.
ಕಾರ್ಯಾಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಜ್ಪೆ ಪೊಲೀಸರು ಬಂದೋಬಸ್ತು ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಗ್ರಾಪಂ ಪಿಡಿಒ ರೋಹಿಣಿ ಹಾಗೂ ಪಂಚಾಯತಿ ಸಿಬ್ಬಂದಿ ಹರೀಶ್ ಮತ್ತಿತರರು ಭಾಗಿಯಾಗಿದ್ದರು.
