ಬಂಟ್ವಾಳ : ಇಲ್ಲಿನ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆ ಮತ್ತು ಮಂಗಳೂರು ಡೆರಿಕ್ ಚೆಸ್ ಶಾಲೆಯ ಸಹೋದರ ವಿದ್ಯಾರ್ಥಿಗಳಿಬ್ಬರು ರಾಜ್ಯಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗೆದ್ದು ಗಮನ ಸೆಳೆದಿದ್ದಾರೆ.
6ನೇ ತರಗತಿ ವಿದ್ಯಾರ್ಥಿ ಧ್ಯಾನ್‍ಕೃಷ್ಣ ಶೆಟ್ಟಿ ದಂಡೆ 11ರ ವಯೋಮಾನ ವಿಭಾಗದಲ್ಲಿ ಮತ್ತು 4ನೇ ತರಗತಿ ವಿದ್ಯಾರ್ಥಿ ಧೀನ್‍ರಾಮ್ ಶೆಟ್ಟಿ ದಂಡೆ 9ರ ವಯೋಮಾನ ವಿಭಾದಲ್ಲಿ ಹಾಸನ ಜಿಲ್ಲೆಯ ಬೇಲೂರಿನಲ್ಲಿ ವೇಲಾಪುರಿ ಚೆಸ್ ಎಸೋಸಿಯೇಶನ್ ವತಿಯಿಂದ ಆ.11 ಮತ್ತು 12ರಂದು ರಂದು ನಡೆದ ರಾಜ್ಯ ಮಟ್ಟದ ಮುಕ್ತ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗೆದ್ದು ಇವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ವಾಮದಪದವು ಸಮೀಪದ ದಂಡೆ ನಿವಾಸಿ ವಕೀಲ ರಾಮಚಂದ್ರ ಶೆಟ್ಟಿ ಮತ್ತು ವಕೀಲೆ ಚೇತನಾ ಆರ್.ಶೆಟ್ಟಿ ದಂಪತಿಗಳ ಪುತ್ರರು.

