ಮುಂಬೈ: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ದಶಮಾನೋತ್ಸವ ಸಮಾರಂಭ ಆ. 22ರಂದು ಸಂಘದ ಅಧ್ಯಕ್ಷ ಪತ್ರಕರ್ತ ಚಂದ್ರಶೇಖರ್ ಪಾಲೆತ್ತಾಡಿ ಮುಂದಾಳತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ನಿರ್ದೇಶನದಲ್ಲಿ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಕಲಾವಿದರ ಸಹಕಾರದೊಂದಿಗೆ ಸಂಘದ ಸದಸ್ಯ ಪತ್ರಕರ್ತರು ಕುರ್ಲಾದ ಬಂಟರ ಸಂಘದಲ್ಲಿ `ಮಹಿಷಾಸುರ ಮರ್ದಿನಿ’ ಯಕ್ಷಗಾನ ಪ್ರದರ್ಶಿಸಿದರು. 
