ಮೂಡುಬಿದಿರೆ : ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್, ರೋಟರಿ ಕ್ಲಬ್, ರೋಟರ್ಯಾಕ್ಟ್ ಕ್ಲಬ್ ಮತ್ತು ರೋಟರಿ ಸಮೂಹ ಸಂಸ್ಥೆ ಮೂಡುಬಿದಿರೆ ಇವುಗಳ ವತಿಯಿಂದ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ 4 ಟನ್ ಅಕ್ಕಿ ಸಹಿತ 5ಲಕ್ಷ ವೆಚ್ಚದ ವಿವಿಧ ಸಾಮಾಗ್ರಿಗಳನ್ನು ಟೆಂಪೋ ಮೂಲಕ ಬುಧವಾರ ಬೆಳಿಗ್ಗೆ ಕಳುಹಿಸಿಕೊಡಲಾಯಿತು.

rotary sahayahastha (2)

ರೋಟರಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ರೋಟರಿ ಶಾಲೆಯಿಂದ ಹೊರಟ ಸಾಮಾಗ್ರಿಗಳನ್ನು ಹೊತ್ತ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಕೊಡಗಿನಲ್ಲಿ ಬಹಳಷ್ಟು ಜಾಗ, ಮನೆ, ಕಟ್ಟಡಗಳು ಕುಸಿದಿರುವುದರಿಂದ ಅಪಾರ ಪ್ರಮಾಣದ ಆಸ್ತಿ – ಪಾಸ್ತಿ ನಷ್ಟ ಉಂಟಾಗಿದ್ದು ಅಲ್ಲಿನ ಜನರ ಬದುಕಿಗೆ ಮಾನವೀಯವಾಗಿ ಸ್ಪಂದಿಸುವುದು ನಮ್ಮ ಕರ್ತವ್ಯ, ರೋಟರಿಯ ಈ ಕಾರ್ಯ ಶ್ವಾಘನೀಯ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಡಾ. ರಮೇಶ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರೋಟರಿ ಟೆಂಪಲ್‍ಟೌನ್‍ನ ಅಧ್ಯಕ್ಷ ವಿನ್ಸೆಂಟ್ ಡಿ”ಕೋಸ್ತ, ಕಾರ್ಯದರ್ಶಿ ಡೆನ್ನಿಸ್ ಪಿರೇರಾ, ಕೋಶಾಧಿಕಾರಿ ಹರೀಶ್ ಎಂ.ಕೆ., ಮಾಜಿ ಅಧ್ಯಕ್ಷರುಗಳಾದ ಯುವರಾಜ್ ಜೈನ್, ಉಮೇಶ್‍ರಾವ್, ರಾಜೇಶ್ ಬಂಗೇರ, ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಪವನ್ ಭಟ್ ಹಾಗೂ ರೋಟರಿಯ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *