ವಿಟ್ಲ: ಯುವಕ ಮಂಡಲ ವಿಟ್ಲ ಇದರ 2018-19 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸದಾನಂದ ಗೌಡ ಸೇರಾಜೆ ಇವರು ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷ ಸುದರ್ಶನ ಪಡಿಯಾರ್, ಕಾರ್ಯದರ್ಶಿ ಜನಾರ್ಧನ ಪದ್ಮಶಾಲಿ, ಉಪಾಧ್ಯಕ್ಷರುಗಳಾಗಿ ವಿ ಆರ್ ಜಗದೀಶ್ ಮತ್ತು ಸೂರ್ಯ ಆಚಾರ್, ಜತೆಕಾರ್ಯದರ್ಶಿ ಆನಂದ, ಕೋಶಾಧಿಕಾರಿ ಗಂಗಾಧರ. ಕ್ರೀಡಾ ಕಾರ್ಯದರ್ಶಿಯಾಗಿ ದಿನೇಶ್ ಆಚಾರ್ಯ ವಿಟ್ಲ ಮತ್ತು ಅಶೋಕ ನೀರಕಣಿ ಹಾಗೂ 24 ಜನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
