ಮೂಡುಬಿದಿರೆ: ಮನುಷ್ಯನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಬಗೆಗಿನ ಪ್ರಶ್ನೆಗೆ ಉತ್ತರಿಸಿ ಬಾಹ್ಯಾಕಾಶ ವ್ಯವಸ್ಥೆಯಲ್ಲಿ ಪ್ರಸ್ತುತವಾಗಿ ಉಳಿದುಕೊಳ್ಳಲು, ವಿಜ್ಞಾನ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಅಗತ್ಯ. ಮನುಷ್ಯನಿರುವ ಉಪಗ್ರಹದ ಸಿದ್ಧತೆಗಳ ಕಾರ್ಯ ಈಗಾಗಲೇ ಆರಂಭಗೊಂಡಿದೆ. ನಮ್ಮನ್ನು ನಾವು ರಕ್ಷಣಾ ಕ್ಷೇತ್ರದಲ್ಲಿ ಸಮರ್ಥರಾಗಿರಲು ಇಂಥಹ ಉಪಗ್ರಹಗಳ ಉಡಾವಣೆಯಾಗಬೇಕು. ಇದು ಸಾಧಾರಣ ಉಪಗ್ರಹಗಳಿಗಿಂತ ಹೆಚ್ಚು ಮಾಹಿತಿಯನ್ನು ನೀಡುತ್ತದೆ ಎಂದು ಇಸ್ರೋದ ಸ್ಪೇಸ್ ಕಮೀಷನ್ನ ಅಧ್ಯಕ್ಷ ಪದ್ಮಶ್ರೀ ಡಾ. ಎ. ಎಸ್. ಕಿರಣ್ಕುಮಾರ್ ಹೇಳಿದರು.
ಆಳ್ವಾಸ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ವೇದಿಕೆ ರೋಸ್ಟ್ರಮ್ನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯನ್ನು ಮಂಗಳವಾರ ನೆರವೇರಿಸಿ ಮಾತನಾಡಿದರು.
ಅಭಿವೃದ್ಧಿಯ ಹೆಸರಿನಲಿ ್ಲಅನುಸರಿಸುವ ದೂರಗಾಮಿ ಅಲ್ಲದ ಕ್ರಮಗಳಿಂದ ನೈಸರ್ಗಿಕ ಪ್ರಕ್ರಿಯೆ ಬಲಹೀನವಾಗುತ್ತದೆ. ಇದುದೇಶದ ಸುಸ್ಥಿರ ಬೆಳವಣಿಗೆಯ ದೃಷ್ಟಿಯಲ್ಲಿ ಅಹಿತಕರ. ಹಾಗಾಗಿ ಇಸ್ರೋ ಸಂಸ್ಥೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಅನುಷ್ಟಾನಗೊಳಿಸಿದೆ. ಈವರೆಗೆ 29ಕ್ಕೂ ಹೆಚ್ಚು ದೇಶಗಳು ನೂರಾರು ಉಪಗ್ರಹಗಳನ್ನು ಉಡಾವಣೆ ಮಾಡಿದೆ ಎಂದರು.
ವಿಜ್ಞಾನದ ಬಳಕೆಯ ಪರಿಣಾಮ ವ್ಯಕ್ತಿಯನ್ನು ಆಧರಿಸಿರುತ್ತದೆ. ಅಣು ಶಕ್ತಿಯನ್ನೇ ನಿದರ್ಶನವಾಗಿ ಪರಿಗಣಿಸುವುದಾದರೆಅದನ್ನು ನಾಶ ಮಾಡುವ ಉದ್ದೇಶದಿಂದಲೂ ಉಪಯೋಗಿಸಬಹುದು ಇಲ್ಲವೇ ವಿದ್ಯುತ್ ಶಕ್ತಿಯಾಗಿಯೂ ಬಳಸಬಹುದು ಎಂದು ಹೇಳಿದರು.
ಆಳ್ವಾಸ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.
ಅಲಹಾಬಾದ್ ಐಐಟಿಯ ನಿರ್ದೇಶಕ ಡಾ. ನಾಗಭೂಷಣ್, ರಾಮಕೃಷ್ಣ ಮಿಷನ್ನ ರಂಜಿತ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳ ಭಾಗವಹಿಸಿದರು.


