ಮೂಡುಬಿದಿರೆ: ಸ್ವಚ್ಛ ಭಾರತ ಎಂಬ ಪರಿಕಲ್ಪನೆಯಡಿಯಲ್ಲಿ ಮೂಡುಬಿದಿರೆಯಲ್ಲಿ 25 ವಾರದಿಂದ ಸ್ವಚ್ಚತಾ ಕಾರ್ಯ ನಡೆಯುತ್ತಿದೆ. ಕ್ಲೀನ್ ಅಪ್ ಬೆದ್ರ ಸ್ವಚ್ಛತಾ ಕಾರ್ಯಕ್ರಮವು 25ನೇ ವಾರಕ್ಕೆ ತಲುಪಿದೆ. ಈ ಕಾರ್ಯಕ್ರಮಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಸಹಿತ ಗಣ್ಯರು ಪಾಲ್ಗೊಂಡು ಪ್ರೋತ್ಸಾಹಿಸಿದರು.
ಸಾವಿರ ಕಂಬದ ಬಸದಿ ಬಳಿ ಪುರಸಭಾ ಸದಸ್ಯ ರತ್ನಾಕರ ದೇವಾಡಿಗ, ಮಾಜಿ ಸೈನಿಕ ರಾಜೇಂದ್ರ ಜಿ. ಸ್ವಚ್ಛತಾ ಜಾಥಾಗೆ ಚಾಲನೆ ನೀಡಿದರು. ಸಾವಿರ ಕಂಬದ ಬಸದಿಯಿಂದ ಪೇಟೆಯ ಮುಖ್ಯರಸ್ತೆಯಲ್ಲಿ ಸಮಾಜ ಮಂದಿರದವರೆಗೆ ಜವನೆರ್ ಬೆದ್ರ ಸಹಿತ ವಿವಿಧ ಸಂಘಟನೆಗಳ ಸದಸ್ಯರು, ಉತ್ಸಾಹಿಗಳು ಸ್ವಚ್ಛತಾ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.
ಸಮಾಜ ಮಂದಿರದ ಬಳಿ ಶಾಸಕ ಉಮಾನಾಥ ಕೋಟ್ಯಾನ್ ಸೇರಿದವರನ್ನು ಉದ್ದೇಶಿಸಿ ಮಾತನಾಡಿ ಸ್ವಚ್ಛತಾ ಕಾರ್ಯ ಅದು ಸೇವಾ ಕಾರ್ಯ ಮಾತ್ರವಲ್ಲ ದೇವತಾ ಕಾರ್ಯ. ಈ ಅಭಿಯಾನ ನಮ್ಮೆಲ್ಲರ ಕರ್ತವ್ಯ ಎನ್ನುವ ಭಾವನೆಯಿಂದ ಎಲ್ಲರೂ ಕೈ ಜೋಡಿಸಿದಾಗ ಸ್ವಚ್ಛಭಾರತ ಅಭಿಯಾನ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ನಿರಂತರ ಸಹಕರಿಸುತ್ತಿರುವ ಹಿರಿಯ ಪೌರ ಕಾರ್ಮಿಕ ಬೊಗ್ಗು, ರೋಟರಿ ಶಾಲಾ ವಿದ್ಯಾರ್ಥಿ ಎಂ.ಎಸ್.ಶ್ರವಣ್, ಅಶ್ವತ್ಥಪುರ ಶಾಲೆಯ ಸನತ್ ಅವರನ್ನು ಶಾಸಕರ ಮೂಲಕ ಗೌರವಿಸಲಾಯಿತು. ಜವನೆರ್ ಬೆದ್ರ ಸಂಘಟನೆಯ ಪರವಾಗಿ ಶಾಸಕರನ್ನೂ ಸಮ್ಮಾನಿಸಲಾಯಿತು.

ಪುರಸಭಾ ಸದಸ್ಯರಾದ ಎಂ. ಬಾಹುಬಲಿ ಪ್ರಸಾದ್, ಲಕ್ಷ್ಮಣ ಪೂಜಾರಿ, ಪ್ರಸಾದ್ ಕುಮಾರ್, ನಾಗರಾಜ ಪೂಜಾರಿ, ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸುಕೇಶ್ , ರಾಜೇಶ್ ಮಲ್ಯ, ಜೇಸೀ ಅಧ್ಯಕ್ಷೆ ಸಂಗೀತಾ ಪ್ರಭು, ಅಳ್ವಾಸ್ ನರ್ಸಿಂಗ್ ಕಾಲೇಜು ಉಪನ್ಯಾಸಕ ಧೀರೇಂದ್ರ ಜೈನ್, ಪತಂಜಲಿ ಯೋಗ ಸಮಿತಿಯ ಯೋಗ ನಿರ್ದೇಶಕಿ ಸವಿತಾ, ಭಗತ್ ಸೇನೆಯ ಸದಸ್ಯರು, ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ, ಪ್ರಧಾನ ಕಾರ್ಯದರ್ಶಿ ಸುನೀಲ್ ಪಣಪಿಲ ಸಹಿತ ಉಪಸ್ಥಿತರಿದ್ದರು.


