ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ನಾವು ಯಾವ ವಿಷಯವನ್ನು ಪ್ರತಿದಿನ ಯೋಚಿಸುತ್ತೇವೆಯೋ ಹಾಗೂ ಆಸಕ್ತಿ ಹೊಂದಿರುತ್ತೇವೆಯೋ, ಭವಿಷ್ಯದಲ್ಲಿ ಅದರಲ್ಲೇ ಸಾಧಿಸುತ್ತೇವೆ. ಹಾಗಾಗಿ ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕ್ಷಮತೆ ಸಾಧಿಸಲು ನಿರಂತರ ಅಭ್ಯಾಸ ಅಗತ್ಯ ಎಂದು ಪತ್ರಿಕಾ ಛಾಯಾಗ್ರಾಹಕ ಸುಧಾಕರ್‍ಜೈನ್ ಅಭಿಪ್ರಾಯಪಟ್ಟರು.
ಇಂದು ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಹೀಗಿದ್ದೂ ನಮ್ಮಲ್ಲಿ ಗುಣಮಟ್ಟದ ಪತ್ರಕರ್ತರ ಕೊರತೆಕಾಣುತ್ತಿದೆ. ಅದನ್ನು ಹೋಗಲಾಡಿಸುವ ಸಲುವಾಗಿ ಒಂದು ಹೊಸ ಉಪಕ್ರಮ ನಮ್ಮಿಂದ ಆಗಬೇಕಿದೆ. ಅದರ ಮೊದಲ ಭಾಗವೇ `ಆಡಿಯೋ ಪೇಪರ್’ ಎಂದು ಹೇಳಿದರು.
ಆಡಿಯೋ ಪೇಪರ್ ಎಂದರೆ ಖಾಸಗಿ ಮೆಸೆಂಜರ್ ಆ್ಯಪ್‍ನಲಿ ್ಲಗ್ರೂಪ್ ನಿರ್ಮಿಸಿ, ಅಲ್ಲಿ ಪ್ರತಿನಿತ್ಯ ಸದಸ್ಯರೆಲ್ಲರ ಪತ್ರಿಕೆಯ ಒಂದು ಸುದ್ದಿಯನ್ನು ಆಡಿಯೋ ರೆಕಾರ್ಡ್ ಮಾಡಬೇಕು. ಅಂತೆಯೇ ಗ್ರೂಪ್‍ನ ಇತರ ಸದಸ್ಯರು ಕಳುಹಿಸಿದ ಧ್ವನಿ ಆಲಿಸಿ, ಪ್ರತಿಯೊಂದರ ಉತ್ತಮ ಅಂಶಗಳನ್ನು ಸೃಜನಾತ್ಮಕ ರೀತಿಯಲ್ಲಿ ಬರೆಯಬೇಕು. ಇದರಿಂದ ಅತ್ಯಲ್ಪ ಸಮಯದಲ್ಲಿ ಹೆಚ್ಚಿನ ಮಾಹಿತಿ ವಿನಿಮಯಆಗುತ್ತದೆ ಎಂದು ತಿಳಿಸಿದರು.
ಸುಧಾಕರ್‍ಜೈನ್ `ಆಡಿಯೋ ಪೇಪರ್’ ತರಬೇತಿಯನ್ನು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳೊಂದಿಗೆ ಆರಂಭಿಸಲಿದ್ದು, ಮೂರು ತಿಂಗಳುಗಳ ಕಾಲ ನಿರಂತರವಾಗಿ ಈ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆಡಾ. ಮೌಲ್ಯಜೀವನ್‍ರಾಮ್ ಮತ್ತು ಇತರ ಉಪನ್ಯಾಸಕರು ಹಾಜರಿದ್ದರು.

