ಬಂಟ್ವಾಳ : ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ರಿ. , ಕೆಥೋಲಿಕ್ ಸಭಾ ಬಂಟ್ವಾಳ ವಲಯ ಹಾಗೂ ಕೆಥೋಲಿಕ್ ಯುವಸಂಚಲನ ಬಂಟ್ವಾಳ ವಲಯ ಮತ್ತು ಬಂಟ್ವಾಳ ಘಟಕ ಜಂಟಿಯಾಗಿ ಏರ್ಪಡಿಸಿದ ಅಲ್ಪಸಂಖ್ಯಾತ ನಿಗಮ ಮತ್ತು ಅಲ್ಪಸಂಖ್ಯಾತ ಇಲಾಖೆ ಹಾಗೂ ಕಂದಾಯ ಇಲಾಖೆ ವತಿಯಿಂದ ಮೊಡಂಕಾಪುವಿನ ಅನುಗ್ರಹ ಸಭಾ ಭವನದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸರಕಾರದಿಂದ ದೊರಕುವ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮವನ್ನು ಪ್ರಧಾನ ಧರ್ಮಗುರುಗಳಾದ ಅ/ವಂ/ ಮ್ಯಾಕ್ಸಿಂ ನೊರೊನ್ಹಾ ಉದ್ಘಾಟನೆ ಮಾಡಿದರು.

ವಲಯಾಧ್ಯಕ್ಷ ಸ್ಟೇನ್ಲಿ ಲೋಬೋ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಪಿಯೂಸ್.ಎಲ್.ರೋಡ್ರಿಗಸ್, ಅಲ್ಪಸಂಖ್ಯಾತ ನಿಗಮ ದ ವ್ಯವಸ್ಥಾಪಕ ಶ್ರೀಧರ ಭಂಡಾರಿ, ಅಲ್ಪಸಂಖ್ಯಾತ ಇಲಾಖಾ ತಾಲೂಕು ಅಧಿಕಾರಿ ಮಹಮ್ಮದ್ ನಝೀರ್, ಕಂದಾಯ ಇಲಾಖಾ ನಿವೃತ್ತ ಉಪತಹಶೀಲ್ದಾರ್ ಜೆ.ಬಿ.ರೋಡ್ರಿಗಸ್, ಕೇಂದ್ರೀಯ ಸಮುದಾಯ ಅಭಿವೃದ್ಧಿ ಸಂಚಾಲಕ ಜೋಕಿಂ ಕಡಬ, ಸಹಸಂಚಾಲಕ ರಿಚಾರ್ಡ್ ಮೆನೆಜಸ್, ಯುವ ಸಂಚಾಲಕ ನವೀನ್ ಬ್ರ್ಯಾಗ್ಸ್, ಸಹಸಂಚಾಲಕಿ ಅನಿತಾ ನೋರೋನ್ಹಾ ಹಾಗೂ ಕೆಥೋಲಿಕ್ ಯುವ ಸಂಚಾಲನದ ಬಂಟ್ವಾಳ ವಲಯಾಧ್ಯಕ್ಷ ಕೆಲ್ವಿನ್, ಘಟಕ ಅಧ್ಯಕ್ಷ ಅವಿನಾಶ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಸಂದೀಪ್ ಮೆನೆಜಸ್ ಉಪಸ್ಥಿತರಿದ್ದರು.
ವಲಯಾಧ್ಯಕ್ಷ ಸ್ಟೇನ್ಲಿ ಲೋಬೋ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಫ್ರಾನ್ಸಿಸ್ ಡೇಸಾ ಕಾರ್ಯಕ್ರಮ ನಿರೂಪಿಸಿದರು. ಕೆ.ಸಭಾ.ವಲಯ ಕಾರ್ಯದರ್ಶಿ ಜೀವನ್ ಲೋಬೋ ವಂದಿಸಿದರು.
