ಉಡುಪಿ: ಆಟಿಯ ತಿಂಗಳಲ್ಲಿ ನಮ್ಮ ಹಿರಿಯರು ಅತ್ಯಂತ ಕಷ್ಟಕರವಾದ ಜೀವನ ಸಾಗಿಸುತ್ತಿದ್ದರೂ ನಮ್ಮ ಸಂಸ್ಕøತಿಯನ್ನು ರಕ್ಷಿಸುವ ಕಾರ್ಯ ಮಾಡುತಿದ್ದರು ಹೀಗಾಗಿ ಅವರು ನಡೆಸಿಕೊಂಡು ಬರುತ್ತಿದ್ದ ಪದ್ದತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಸರ್ಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ನಾಗರಾಜ್ ಜಿ.ಎಸ್ ಹೇಳಿದರು.
ಶ್ರೀ ಕೃಷ್ಣ ಬಾಲನಿಕೇತನ ದಲ್ಲಿ ಜೆಸಿಐ ಕಲ್ಯಾಣಪುರ ಕೋಸ್ಮೋ ಸಿಟಿ ವತಿಯಿಂದ ನಡೆದ ಆಟಿಯ ನೆನಪು ಮತ್ತು ವಿದ್ಯಾರ್ಥಿಗಳ ವಿವಿಧ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆ.14 ರಂದು ಪ್ರಧಾನ ಬಾಷಣ ಮಾಡಿದರು.

aatida neneapu (2)
ಕಾರ್ಯಕ್ರಮವನ್ನು ಜೇಸಿಐ ವಲಯ 15 ರ ಕಾರ್ಯಕ್ರಮ ನಿರ್ದೇಶಕ ಜಯೇಶ್ ಬರೆಟ್ಟೋ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿ ವಲಯ ಉಪಾದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡಿ,ಈ ಹಿಂದೆ ನಮ್ಮ ಆಹಾರವೇ ಔಷಧವಾಗಿತ್ತು ಆದರೆ ಇಂದು ಔಷದವೇ ಆಹಾರವಾಗಿರುವುದು ದುರಂತ ಹೀಗಾಗಿ ಆಟಿಯ ತಿಂಗಳಲ್ಲಿ ಉತ್ತಮ ಆಹಾರವನ್ನು ಸ್ವೀಕರಿಸಿ ಆ ಮೂಲಕ ನಮ್ಮ ಹಿರಿಯರು ಪಾಲಿಸುತ್ತಿದ್ದ ಕ್ರಮವನ್ನು ನಾವು ಪಾಲಿಸಬೇಕು ಎಂದರು.

aatida neneapu (1)
ಅದ್ಯಕ್ಷತೆಯನ್ನು ಜೆಸಿಐ ಕಲ್ಯಾಣಪುರ ಕೋಸ್ಮೋ ಸಿಟಿ ಅದ್ಯಕ್ಷ ಶ್ರೀನಿವಾಸ್ ಜಿ ವಹಿಸಿದ್ದರು.ಬಾಲನಿಕೇತನದ ಕಾರ್ಯದರ್ಶಿ ರಾಮಚಂದ್ರ ಉಪಾದ್ಯ,ಕಾರ್ಯದರ್ಶಿ ಸುಬ್ರಮಣ್ಯ ಆಚಾಠರ್ಯ,ರಿತೇಶ್ ಕುಮಾರ್,ರೇವತಿ ಮುಂತಾದವರು ಉಪಸ್ಥಿತರಿದ್ದರು.
ನಂತರ ವಿದ್ಯಾರ್ಥಿಗಳ ಸ್ಪರ್ಧಾ ಕಾರ್ಯಕ್ರಮ ನಡೆಯಿತು.ಹೇಮಂತ್ ಕಾಂತ್ ದಂಪತಿಗಳನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ನಿಕಟಪೂರ್ವ ವಲಯಾದ್ಯಕ್ಷ ಸಂತೋಷ್ ಜಿ ಸ್ಫಾಪಕರು ಮತ್ತು ಸದಸ್ಯರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *