ಬಂಟ್ವಾಳ: ಮಂಗಳೂರು – ಬೆಂಗಳೂರು ಮತ್ತು ಮಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಷೇದ ಮಾಡಲಾಗಿದೆ. ವಾಹನ ಸವಾರ ರಿಗೆ ಹೀಗೊಂದು ಸೂಚನಾ ಫಲಕ ಬಿಸಿರೋಡಿನ ಮುಖ್ಯವ್ರತ್ತದಲ್ಲಿ ಹಾಗೂ ಮಾಣಿ ಜಂಕ್ಸ್ ನ್ ನಲ್ಲಿ ಟ್ರಾಫಿಕ್ ಠಾಣಾ ಪೋಲೀಸರು ಹಾಕಿರುವುದು ಗಮನ ಸೆಳೆಯುತ್ತಿದೆ.

maani
ಹಲವು ದಿನಗಳಿಂದ ನಿರಂತರವಾಗಿ ಸುರಿಯುವ ಗಾಳಿ ಮಳೆಗೆ ಈ ಎರಡು ರಾಷ್ಟ್ರೀಯ ಹೆದ್ದಾರಿ ಗಳಿಗೆ ಮರ ಬಿದ್ದು ಹಾಗೂ ಗುಡ್ಡ ಜರಿದು ಸಂಚಾರಕ್ಕೆ ಅನಾನುಕೂಲವಾಗಿದೆ. ಹಾಗಾಗಿ
ಶಿರಾಡಿ ಘಾಟ್ ರಸ್ತೆಯ ಮೂಲಕ ಮತ್ತು ಮಾಣಿಯಿಂದ ಮೈಸೂರು ಕಡೆ ಘನ ವಾಹನ ಸಂಚಾರಕ್ಕೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಎಲ್ಲಾ ಘನ ವಾಹನಗಳು ಚಾರ್ಮಾಡಿ ಘಾಟ್ ರಸ್ತೆಯಾಗಿ ಸಂಚಾರ ಮಾಡಬೇಕು ಎಂದು ಸೂಚನಾ ಫಲಕ ಹಾಕಲಾಗಿದೆ.
ಟ್ರಾಫಿಕ್ ಎಸ್.ಐ.ಮಂಜುಳಾ ಅವರು ಸೂಚನ ಫಲಕ ವನ್ನು ಹಾಕಿದ್ದಲ್ಲದೆ ಈ ಎರಡು ಕಡೆಗಳಲ್ಲಿ ಹೆಚ್ಚುವರಿ ಪೋಲೀಸರನ್ನು ನಿಯೋಜನೆ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *