ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ 72ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣರಾಜರ್ಷಿಡಾ.ಡಿ. ವೀರೇಂದ್ರ ಹೆಗ್ಗಡೆ ಧ್ವಜಾರೋಹಣ ನೆರವೇರಿಸಿದರು.

alvas independence day (1)

‘ಕೋಟಿಕಂಠೋಂಸೇ’ ರಾಷ್ಟ್ರ ಐಕ್ಯತಾಗೀತೆಗೆ ನೆರೆದವರೆಲ್ಲಾ ತ್ರಿವರ್ಣಧ್ವಜವನ್ನು ಹಾರಿಸಿದರು. 20000ಅಧಿಕ ಮಂದಿ ಸ್ವಾತಂತ್ರೋತ್ಸವ ಸಮಾರಂಭಕ್ಕೆ ಸಾಕ್ಷಿಯಾದರು. ಭಾರತೀಯ ಸೇನೆಯ ಅನೇಕ ನಿವೃತ್ತ ಸೈನ್ಯಾಧಿಕಾರಿಗಳು ಧ್ವಜಾರೋಹಣದಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ನಮ್ಮಲ್ಲಿ ಬೇಧ- ಭಾವ ಇದ್ದರೆ ದೇಶ ಉಳಿಯದು, ಹಾಗಾಗಿ ಒಗ್ಗಟ್ಟಿನಿಂದ ಹೋರಾಡಿಏಕತೆ ಸಾಧಿಸಬೇಕು. ಅದಕ್ಕನುಗುಣವಾಗಿ ನೀವೆಲ್ಲಾ ಇಂದು ಜಾತಿ, ಮತ, ಧರ್ಮ, ಪಂಥ ಎಂಬ ಬೇಧವಿಲ್ಲದೆ ಭಾರತೀಯರು ಎಂಬ ಭಾವದಿಂದ ಐಕ್ಯರಾಗಿರುವುದು ಒಳ್ಳೆಯ ವಿಚಾರ” ಎಂದು ಹೇಳಿದರು.
“ನಮ್ಮದೇಶವನ್ನು ಬ್ರಿಟೀಷರದಾಸ್ಯದಿಂದ ಬಿಡಿಸಿಕೊಳ್ಳುವಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವಿದೆ ಎಂಬುವುದನ್ನು ನಾವಿಂದು ನೆನಪು ಮಾಡಿಕೊಳ್ಳಬೇಕು. ನಮ್ಮಲ್ಲಿ ಇದ್ದ ಬೇಧ ಭಾವದ ದುರ್ಬಲತೆಯಿಂದ ಲಾಭ ಪಡೆದು ಬ್ರಿಟಿಷರು ನಮ್ಮದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಿದರು. ಆದರೆಇಂದು ಆ ಎಲ್ಲಾ ತಾರತಮ್ಯದ ಮನೋಭಾವದಿಂದ ಮುಕ್ತರಾಗಿ ಮುನ್ನಡೆಯುತ್ತಿರುವುದು ದೇಶದ ಹಿತದೃಷ್ಠಿಯಿಂದಉತ್ತಮ ಬೆಳವಣಿಗೆ” ಎಂದು ಅಭಿಪ್ರಾಯಪಟ್ಟರು.

alvas independence day (3)
“ನಮ್ಮದೇಶದ ಸ್ವಾತಂತ್ರ್ಯ ಹೋರಾಟವು ಶಾಂತಿ ಹಾಗೂ ಕ್ರಾಂತಿ ಮಾರ್ಗಗಳನ್ನನುಸರಿಸಿ ನಡೆದಿತ್ತು. ಆದರೆ ಕೊನೆಯಲ್ಲಿ ಹಿಂಸೆ, ಸಾವು, ನೋವುಗಳಿಂದ ಗಳಿಸಿದ ಸ್ವಾತಂತ್ರ್ಯ ಶಾಶ್ವತವಲ್ಲ ಎಂಬುದು ಸಾಬೀತಾಯಿತು. ಅಂತೆಯೇ ನಾವೂ ಕೂಡ ಮಹಾತ್ಮಗಾಂಧಿಯವರ ಅಹಿಂಸಾ ತತ್ವದ ಮುಖೇನ ಒಗ್ಗಟ್ಟಿನಿಂದ ಅಖಂಡ ಭಾರತವನ್ನು ನಿರ್ಮಿಸಬೇಕಿದೆ” ಎಂದು ಕರೆ ನೀಡಿದರು.
“ಸಾಕಷ್ಟು ತ್ಯಾಗ ಬಲಿದಾನದಿಂದ ನಮಗೆ ಇಂದು ಸ್ವಾತಂತ್ರ್ಯದೊರಕಿದೆ. ಪ್ರಾಚೀನ ಕಾಲದಲ್ಲಿ ಅವಕಾಶಗಳಿಗೆ ಕೊರತೆ ಇತ್ತು.ಆದರೆ ಇಂದು ವಿದ್ಯಾರ್ಥಿಗಳಿಗೆ ಅವಕಾಶಗಳು ಸಾಕಷ್ಟಿದೆ ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಅಗತ್ಯ. ಅದಕ್ಕಾಗಿ ನಮ್ಮಲ್ಲಿ ತುಡಿತ, ಆತ್ಮಸ್ಥೈರ್ಯ, ಧೈರ್ಯ, ಕಠಿಣ ಪರಿಶ್ರಮ ಮುಖ್ಯವಾಗಿ ಇರಬೇಕಾಗುತ್ತದೆ. ದೇಶದಲ್ಲಿ ಅನೇಕ ರೀತಿಯ ಬದಲಾವಣೆಯಾಗುತ್ತಿದೆ. ಯುವ ಪೀಳಿಗೆಯು ಹೊಸ ಹೊಸ ಆವಿಷ್ಕಾರಗಳಿಗೆ ತಮ್ಮನ್ನುತಾವು ತೊಡಗಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
“ದೇಶಅಭಿವೃದ್ಧಿ ಹೊಂದಬೇಕಾದರೆ ಕೈಗಾರಿಕೆ ಮತ್ತು ಕೃಷಿ ಎರಡೂ ಕ್ಷೇತ್ರಗಳ ಸುಸ್ಥಿರ ಬೆಳವಣಿಗೆ ಮುಖ್ಯ. ಅದರಂತೆ ನಮ್ಮದೇಶದ ಧ್ವಜ ಕೂಡ ಇದನ್ನೇ ಸೂಚಿಸುತ್ತದೆ.ಕೇಸರಿಕೈಗಾರಿಕೆಯನ್ನು ಸಂಕೇತಿಸಿದರೆ, ಹಸಿರು ಕೃಷಿಯನ್ನು ಸೂಚಿಸುತ್ತದೆ ಮತ್ತು ಬಿಳಿ ಬಣ್ಣಇವೆರಡರ ನಡುವೆ ಶಾಂತಿ ಸಾಧಿಸಿ ಒಟ್ಟಿಗೆ ಸಾಗಬೇಕೆಂದು ತಿಳಿಸುತ್ತದೆ” ಎಂದರು.

alvas independence day (2)
“ಆಳ್ವಾಸ್ ಶಿಕ್ಷಣ ಸಂಸ್ಥೆ ಇಂದು ದೇಶದ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ, ವಿದ್ಯಾರ್ಥಿಗಳನ್ನು ಶಿಸ್ತಿನ ಸಿಪಾಯಿಗಳನ್ನಾಗಿ ಬೆಳೆಸುವಂತಹ ಕಾರ್ಯ ಮಾಡುತ್ತಿರುವುದೇ ಇದಕ್ಕೆಕಾರಣ.  ಅಲ್ಲದೇ ಇಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಳ್ಳೆಯ ಅವಕಾಶವನ್ನು ಹಾಗೂ ಉತ್ತಮ ವೇದಿಕೆಯನ್ನುಕಲ್ಪಿಸುತ್ತಿರುವುದರಿಂದ ಇಲ್ಲಿ ಕಲಿತು ಹೋದ ಎಷ್ಟೋ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿ ಯಶಸ್ವಿಯಾಗಿರುವುದನ್ನು ನಾನು ಕಂಡಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದರು.
ಕ್ಯಾಪ್ಟನ್ ಡಾ ರಾಜೇಶ್, ಪ್ಲೈಯಿಂಗ್ ಆಫೀಸರ್ ಫರ್ವೇಜ್, ಸಿಎಚ್‍ಎಮ್ ಶಾಜಿ, ಸಿಎಚ್‍ಎಮ್ ಅನಿಲ್ ಕುಮಾರ್ ಭಾಗಿಯಾದರು.
ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಅಧ್ಯಕ್ಷಡಾ.ಮೋಹನ್ ಆಳ್ವ, ಮಾಜಿ ಶಾಸಕ ಅಭಯಚಂದ್ರಜೈನ್, ಟ್ರಸ್ಟಿ ಜಯಶ್ರೀ ಅಮರನಾಥ್ ಶೆಟ್ಟಿ,ಧನಲಕ್ಷ್ಮಿಕ್ಯಾಶೂ ಇಂಡಸ್ಟ್ರೀಸ್‍ನ ಶ್ರೀಪತಿ ಭಟ್ ಮತ್ತಿತರಗಣ್ಯರು ಉಪಸ್ಥಿತರಿದ್ದರು.

ಪ್ರತಿ ಬಾರಿ ಆಳ್ವಾಸ್ ಸ್ವಾತಂತ್ರ್ಯ ಸಂಭ್ರಮಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲುರಂಗಮಂಟಪದಲ್ಲಿ ನಡೆಯುತ್ತಿತ್ತು, ಆದರೆ ಈ ಬಾರಿ ಮಳೆಯ ಅಡಚಣೆಯಿಂದ ನುಡಿಸಿರಿ ವೇದಿಕೆಯಲ್ಲಿಕಾರ್ಯಕ್ರಮವನ್ನು ಸ್ಥಳಾಂತರಿಸಲಾಯಿತು.ವರುಣನಆರ್ಭಟಇದ್ದರೂಅದಕ್ಕೆಸವಾಲೊಡ್ಡುವಂತೆಅತ್ಯಂತಅಚ್ಚುಕಟ್ಟಾಗಿ ಸ್ವಾತಂತ್ರ್ಯ ದಿನಾಚರಣೆ ಆಳ್ವಾಸ್‍ನಲ್ಲಿ ನಡೆಯಿತು.

By suddi9

Leave a Reply

Your email address will not be published. Required fields are marked *