ಬೆಳ್ಮಣ್: ಕಡಂದಲೆ ಸುಬ್ರಹ್ಮಣ್ಯಸ್ವಾಮಿ ಪ್ರೌಢ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ಶಾಲಾ ಹಳೆಯ ವಿದ್ಯಾರ್ಥಿ ಸಂಘ ಹಾಗು ಜೇಸಿಐ ಮುಂಡ್ಕೂರು ಭಾರ್ಗವ ಸಂಸ್ಥೆಯ ಸಹಭಾಗಿತ್ವದಲ್ಲಿ ಕೊಡ ಮಾಡಿದ ಸುಮಾರು ಒಂದು ಲಕ್ಷ ರೂ ಮಿಕ್ಕಿದ ಮೌಲ್ಯಗಳ ಮಕ್ಕಳ ಸಮವಸ್ತ್ರ ಹಾಗು ಇತರ ಪರಿಕರ ಮತ್ತು ಶಾಲಾ ಸಂಚಾಲಕ ಕಡಂದಲೆ ಗುತ್ತು ಸುದರ್ಶನ ಶೆಟ್ಟಿಯವರು ನೀಡಿದ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

belman kadandale
ಕಾರ್ಯಕ್ರಮದಲ್ಲಿ ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ವಿದ್ಯಾಥಿಗಳನ್ನು ನೂರರ ಅಂಕ ಗಳಿಕೆಗಾಗಿ ತಯಾರಿಸುವ ಕೇಂದ್ರಗಳಾಗಬಾರದು. ಶಾಲೆಗಳು ಭವಿಷ್ಯವನ್ನು ರೂಪಿಸುವ ದೇಗುಲವಾಗಬೇಕು. ಶಾಲೆಗಳು ದೇಶದ ಭಾವಿ ಪ್ರಜೆಗಳನ್ನು ರೂಪಿಸುವ ಕೇಂದ್ರಗಳು ಮಕ್ಕಳು ಕಷ್ಟ ಪಟ್ಟು ಕಲಿತ ವಿದ್ಯೆಗಳನ್ನು ನೆನೆಪಿಟ್ಟು ಕೊಂಡು ಅದನ್ನುತನ್ನ ಜೀವನದಲ್ಲಿ ಅಳವಡಿಸಿದರೆ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದ ಅವರು. ನನ್ನ ಕ್ಷೇತ್ರದ ಎಲ್ಲಾ ಶಾಲೆಗಳು ನೂರರ ಫಲಿತಾಂಶಗಳನ್ನು ತಂದು ಕೊಟ್ಟರೆ ಅದೇ ನನಗೆ ನೀವು ಕೊಡುವ ಸನ್ಮಾನ ಶಿಕ್ಷಕರು ಮಕ್ಕಳ ಪಾಠ ಜೊತೆ ಪಾಠ್ಯೇತರ ಶಿಕ್ಷಣ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಶಾಲಾ ಸಂಚಾಲಕ ಸುದರ್ಶ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ದಕ ಜಿಪಂ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ, ನಿವೃತ್ತ ಶಿಕ್ಷಕ ಜಯಶೀಲ ಭಟ್, ಜೇಸಿ ವಲಯ ಉಪಾಧ್ಯಕ್ಷ ರಘುನಾಥ್ ನಾಯಕ್ ಮುಂಡ್ಕೂರು ಜೇಸಿ ಭಾರ್ಗವ ಅಧ್ಯಕ್ಷೆ ಅರುಣ ಕುಲಾಲ್, ಪ್ರಸಾದ್ ಶೆಟ್ಟಿ, ವೆಂಕಟೇಶ್ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಂದ್ರಭಟ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಲೀಲಾ, ಸುಧಾಕರ ಆಂಚನ್, ದಿನೇಶ್ , ಜಗದೀಶ್ ಕೋಟ್ಯಾನ್, ಪುರಂದರ ಆಚಾರ್ಯ ಮಕ್ಕಳ ಹೆತ್ತವರು ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಸುಧಾಕರ್ ಬಿ. ಸ್ವಾಗತಿಸಿ, ಸುಧಾಕರ್ ಪೊಸ್ರಾಲು ನಿರೂಪಿಸಿ ಸದಾಶಿವ ಉಪಧ್ಯಾಯ ವಂದಿಸಿದರು.

By suddi9

Leave a Reply

Your email address will not be published. Required fields are marked *