ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್ ಉದ್ಘಾಟಿಸಿದರು.

ಹಳೆಯದ್ದು, ಪುರಾತನವಾದದ್ದು ಎಂಬ ನೆಪದಲ್ಲಿ ಎಲ್ಲಾ ನಂಬಿಕೆಗಳನ್ನು ಯಥಾವತ್ತಾಗಿ ಸ್ವೀಕರಿಸುವ ಮುನ್ನ ವೈಚಾರಿಕ ಹಾಗೂ ವೈಜ್ನಾನಿಕ ದ್ರಷ್ಠಿಕೋನದಿಂದ ವಿಶ್ಲೇಷಿಸಿ ಮನುಕುಲಕ್ಕೆ ಹಿತವಾಗಿರುವ ನಂಬಿಕೆಗಳನ್ನಷ್ಟೇ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿರುವುದು ಇಂದಿನ ಅನಿವಾರ್ಯವಾಗಿದೆ. ನಿಸರ್ಗದೊಂದಿಗೆ ಬದುಕುವ ಪಾಠವನ್ನು ತೆರೆದಿಡುವ ಆಟಿ ತಿಂಗಳ ಕೆಲವು ಆಚರಣೆಗಳು ಮಾತ್ರ ಇಂದಿಗೂ ಪ್ರಸ್ತುತವಾಗಿದೆ ಹಿಂದಿನ ಕಾಲದಲ್ಲಿ ಪ್ರಕೃತಿ ಸಹಜವಾಗಿ ಆಟಿ ತಿಂಗಳಲ್ಲಿ ಸೃಷ್ಢಿಯಾಗಿದ್ದ ಬಡತನ, ಭಯ, ಅನಾರೋಗ್ಯ ನಿವಾರಣೆಗಾಗಿ ಹಿರಿಯರು ಕಂಡುಕೊಂಡಿದ್ದ ಪರಿಹಾರೋಪಾಯಗಳೇ ಇಂದು ಆಟಿಯ ಆಚರಣೆಗಳಾಗಿ ಗಮನ ಸೆಳೆಯುತ್ತದೆ ಎಂದು ಎ.ಗೋಪಾಲ ಅಂಚನ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಉಮೇಶ್ ನಿರ್ಮಲ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಜಯರಾಜ್ ಎಸ್. ಬಂಗೇರ, ರೋಟರಿ ಪ್ರಮುಖರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಸಂಜೀವ ಪೂಜಾರಿ ಗುರುಕೃಪ, ನಾರಾಯಣ ಹೆಗ್ಡೆ, ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಆಶಾಮಣಿ ರೈ, ಕಾರ್ಯದರ್ಶಿ ವಿಂದ್ಯಾ ಎಸ್.ರೈ, ನಿಕಟಪೂರ್ವ ಅಧ್ಯಕ್ಷೆ ಪಲ್ಲವಿ ಕಾರಂತ ಮತ್ತಿತರರು ಉಪಸ್ಥಿತರಿದ್ದರು.
