ಉಡುಪಿ: ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ ಇದರ ಎನ್.ಎಸ್.ಎಸ್ ಘಟಕದ ವತಿಯಿಂದ ಕೆಸರಿನಲ್ಲಿ ಒಂದು ದಿನ ಮತ್ತು ವಿದ್ಯಾರ್ಥಿಗಳ ಗದ್ದೆ ನಾಟಿ ಕಾರ್ಯಕ್ರಮ ಆ.4 ರಂದು ಬೈಲೂರು ಕೊರಂಗ್ರಪಾಡಿಯ ಕಲಾ ಕಿರಣ್ ಆಶ್ರಯದಲ್ಲಿ ನಡೆಯಿತು.

ಕಾಲೇಜಿನ ಆಡಳಿತಾಧಿಕಾರಿ ಪ್ರೋ.ದಯಾನಂದ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದು ರೈತರ ಅರಿವು ಆಗಬೇಕಾಗಿದೆ ಕೃಷಿಯಲ್ಲಿ ಯಾವ ರೀತಿಯಲ್ಲಿ ರೈತರು ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಇದರ ಪರಿಚಯ ಮತ್ತು ಕೃಷಿ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಧಿಕಾ ಪೈ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಇಂದಿನ ಆಧುನಿಕ ಜೀವನದಲ್ಲಿ ಜನರಿಗೆ ಕೃಷಿಯ ಬಗ್ಗೆ ಒಲವು ಕಡಿಮೆಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಾದರೂ ಅಕ್ಕಿಯನ್ನು ಯಂತ್ರದಲ್ಲಿ ತಯಾರಿಸಲು ಅಸಾಧ್ಯ ಅದನ್ನು ಹೊಲದಲ್ಲಿಯೇ ತಯಾರಿಸಬೇಕು,ಮಣ್ಣಿನಲ್ಲಿ ಅನೇಕ ಚರ್ಮ ರೋಗಗಳನ್ನು ನಿವಾರಿಸುವ ಗುಣಗಳಿದೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸವಿಯನ್ನು ಜೀವನದಲ್ಲಿ ಅಳವಡಿಸಬೇಕು ಎಂದರು.
ರಾಷ್ಟ ಪುರಸ್ಕಾರ ಪಡೆದ ಪ್ರಗತಿಪರ ಕೃಷಿಕರಾದ ಕುದಿ ಶ್ರೀನಿವಾಸ ಭಟ್ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಲಾ ಕಿರಣ್ ಕ್ಲಬ್ ನ ಅದ್ಯಕ್ಷ ಸುರೇಶ್ ಬಂಗೇರ, ನಿವೃತ್ತ ಆದಾಯ ತೆರಿಗೆ ಅಧಿಕಾರಿ ಸುಭಾಷ್ ಕೆ,ವೆಂಕಟೇಶ್ ಪ್ರಭು, ದಿವಾಕರ್ ಸನಿಲ್, ಗ್ದೆಯ ಮಾಲಿಕರಾದ ಶ್ರೀನಿವಾಸ ಆಚಾರ್ಯ,ಉಪನ್ಯಾಸಕರಾದ ಶ್ರೀನಿವಾಸ ವೈದ್ಯ,ಶೈಲಜಾಪೈ,ಚಿರಂಜನ್ ಶೇರಿಗಾರ್ ಮುಂತಾದವರು ಉಪಸ್ಥಿತರಿದ್ದರು.
