ಮೂಡುಬಿದಿರೆ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಾಂಟ್ರಾಡಿಯಲ್ಲಿ ಮರಾಠಿ ಶಿವಾಜಿ ಸೇವಾ ಸಂಘ ಬಡಕ್ಕೋಡಿ ಮಾಂಟ್ರಾಡಿ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯ ವಿವೇಕ ಕಾಯಕರತ್ನ ಪ್ರಶಸ್ತಿ ವಿಜೇತರಾದ ನವೀನ್ ನಾಯ್ಕ ಅವರ ನೇತೃತ್ವದಲ್ಲಿ ಸ್ವಚ್ಛತಾ ಹಾಗೂ ತೆಂಗಿನ ಸಸಿ ನೆಡುವ ಕಾರ್ಯಕ್ರಮಗಳು ಸೋಮವಾರ ನಡೆಯಿತು.
ಕಳೆದ ವರ್ಷ ನವೀನ್ ನಾಯ್ಕರ ಮುಂದಾಳತ್ವದಲ್ಲಿ ಶಾಲಾ ಕೈತೋಟ ನಿರ್ಮಾಣವಾಗಿತ್ತು.

mantrady-sacchatha nd sasi neduva karyakrama
ಅಡಿಕೆ ಮತ್ತು ತೆಂಗಿನ ಸಸಿಗಳಿಗೆ ಅಗತ್ಯವಿದ್ದ ಗೊಬ್ಬರವನ್ನು ನವೀನ್ ನಾಯ್ಕ ನೀಡಿದರು. ಅದರ ಸಾಗಾಟಕ್ಕೆ ಸಾರಿಗೆ ವ್ಯವಸ್ಥೆಯನ್ನು ಅಶೋಕ ನಾಯ್ಕ ನೀಡಿದರು. ಮಾಂಟ್ರಾಡಿ ಚಂಪ ನಿವಾಸದ ಅಶೋಕ್ ಕುಮಾರ್ ಜೈನ್ ಹುಲ್ಲು ತೆಗೆಯುವ ಯಂತ್ರ ನೀಡಿ ಸಹಕರಿಸಿದರು.

ಈ ಕಾರ್ಯಕ್ರಮದಲ್ಲಿ ಬಡಕ್ಕೋಡಿ ಮರಾಠಿ ಶಿವಾಜಿ ಸೇವಾ ಸಂಘದ ಅಧ್ಯಕ್ಷ ಅಶೋಕ ನಾಯ್ಕ, ಸದಸ್ಯರಾದ ರಾಘು ನಾಯ್ಕ, ನಿಕೇಶ್ ನಾಯ್ಕ, ಕುಶಾಲ್ ನಾಯ್ಕ, ಬೆಳ್ತಂಗಡಿ ತಾಲೂಕು ಮೂಡುಕೋಡಿ ಗ್ರಾಮದ ಕಲ್ಯರಡ್ಡ ಮನೆ ವಾಸು ಮುಂತಾದವರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *