ಮೂಡುಬಿದಿರೆ, ಅ.4 : ಮಿಜಾರು ಸರಕಾರಿ ಪ್ರೌಢ ಶಾಲೆಯಲ್ಲಿ ಕಲ್ಲಮುಂಡ್ಕೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಆ.1 ಬುಧವಾರದಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ನಾವು ಸಂಬಂಧಗಳನ್ನು ಉಳಿಸಿ ಪ್ರತಿಭೆಗಳನ್ನು ಬೆಳೆಸುವತ್ತ ಮುಂದಾಗಬೇಕು, ಆ ಮೂಲಕ ಪ್ರತಿಭಾ ಕಾರಂಜಿ ಯಶಸ್ಸು ಸಾಧಿಸಲಿ ಎಂದು ಶುಭಹಾರೈಸಿದರು.
ಗ್ರಾ.ಪಂ ಸದಸ್ಯ, ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮೂಡುಬಿದಿರೆ ವಲಯ ಶಿಕ್ಷಣಾಧಿಕಾರಿ ಆಶಾ, ದೈ.ಶಿ.ಶಿ.ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ಸಿ.ಆರ್ ಪಿ ಗೋಪಾಲಕೃಷ್ಣ, ಗ್ರಾ.ಪಂ ಸದಸ್ಯರಾದ ಪ್ರವೀಣ್, ಕುಸುಮ, ಲಕ್ಷ್ಮೀ, ಸುಜಾತ, ಮಾಜಿ ತಾ.ಪಂ ಸದಸ್ಯ ಎಂ.ಜಿ ಮೊಹಮ್ಮದ್, ಮಿಜಾರು ಸರ್ಕಾರಿ ಪ.ಪೂ ಕಾಲೇಜಿನ ಪ್ರಾಚಾರ್ಯ ಬರ್ನಾಡ್ ಕರ್ಡೋಜ, ಶಿಕ್ಷಕ ನಾರಾಯಣ್, ಶಿಕ್ಷಕ ಸಂಘದ ಅಧ್ಯಕ್ಷ ನಾಗೇಶ್, ಮಾಜಿ ಸೈನಿಕ, , ಉದ್ಯಮಿ ದಿವಾಕರ ಶೆಟ್ಟಿ, ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ನವೀನ್ಚಂದ್ರ ಅಂಬೂರಿ ಬೇಬಿ ಸ್ವಾಗತಿಸಿದರು. ಸಹಶಿಕ್ಷಕ ಮುಖೇಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವೀಣಾ ವಂದಿಸಿದರು.

