ಬಂಟ್ವಾಳ: ಸುಮಾರು 37 ವರ್ಷಗಳ ಸುದೀರ್ಘ ಕಾಲ ಗ್ರಹ ರಕ್ಷಕದಳದಲ್ಲಿ ಸೇವೆ ಸಲ್ಲಿಸಿ, ನಿವ್ರತ್ತಿ ಹೊಂದಿದ ಅರುಣ್ ಆಚಾರ್ಯ ಅವರ ಬೀಳ್ಕೋಡುಗೆ ಕಾರ್ಯಕ್ರಮ ಕೋರ್ಟು ಮೈದಾನದಲ್ಲಿ ನಡೆಯಿತು. ಗ್ರಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಡಾ! ಮುರಳಿ ಮೋಹನ್ ಚೂಂತಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಸಿದರು.
ಇಂದು ವ್ಯವಹಾರಿಕವಾಗಿರುವ ಬದುಕಿನಲ್ಲಿ ನಿಷ್ಕಾಂಶವಾಗಿ ಸೇವೆ ಸಲ್ಲಿಸುವ ದಳದ ಸಿಬ್ಬಂದಿಗಳು ನಿಜಕ್ಕೂ ಅಭಿನಂದನೆ ಸಲ್ಲಿಸಬೇಕು. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿವ್ರತ್ತಿಯ ವರೆಗೆ ಸೇವೆ ಸಲ್ಲಿಸಿದ ಸಿಬ್ಬಂದಿ ಗಳು ಇತರರಿಗೆ ಮಾರ್ಗದರ್ಶಕರಾಗಬೇಕು. ಶಿಸ್ತನ್ನು ಅಳವಡಿಸಿಕೊಂಡು ಕೆಲಸ ಮಾಡಿದರೆ ಜೀವನಕ್ಕೂ ಸಹಾಯಕವಾಗುತ್ತದೆ. ಗ್ರಹರಕ್ಷಕ ದಳದ ಸೇವೆಗೆ ಸೇರಿದ ಬಳಿಕ ನನ್ನ ಜೀವನ ಶೈಲಿ ಬದಲಾಗಿದೆ, ಉತ್ತಮ ಬದುಕು ನೀಡಿದೆ ಎಂದು ನಿವೃತ್ತಿ ಹೊಂದಿದ ಅರುಣ್ ಕುಮಾರ್ ಆಚಾರ್ಯ ಹೇಳಿದರು.

ಈ ಸಂದರ್ಭದಲ್ಲಿ ಡೆಪ್ಯುಟಿ ಕಮಾಂಡೆಂಟ್ ರಮೇಶ್, ನಿವ್ತತ್ತ ಘಟಕಾಧಿಕಾರಿಕ್ರಷ್ಣ ನಾಯ್ಕ್, ಪ್ರಭಾರ ಘಟಕಾಧಿಕಾರಿ ನಿವಾಸ ಆಚಾರ್ಯ, ಹಿರಿಯ ಗ್ರಹರಕ್ಷಕರಾದ ಐತ್ತಪ್ಪ, ಜಯಗಣೇಶ್, ರಮೇಶ್, ಮಾಲತಿ, ಜಯಂತ, ಶಿವರಾಜ್, ಚಿದಾನಂದ, ಯಾದವ ಜೋಗಿ, ಬಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.

