ಬಂಟ್ವಾಳ: ರೋಟರಿ ಸಮುದಾಯ ದಳ ಕಡೇಶಿವಾಲಯ ಇದರ 2018-19 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ವನಮಹೋತ್ಸವ ಕಾರ್ಯಕ್ರಮವು ಕಡೇಶಿವಾಲಯ ಗ್ರಾಮೀಣ ರೋಟರಿ ಭವನದಲ್ಲಿ ಜು.29ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅದ್ಯಕ್ಷತೆಯನ್ನು ರೋಟರಿ ನಿಯೋಜಿತ ಅಧ್ಯಕ್ಷ ರೊ. ಪ್ರ ಕಾಶ್ ಬಾಳಿಗಾ ವಹಿಸಿದ್ದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಶಿವಾಣಿ ಬಾಳಿಗಾ, ವಲಯ ಅರಣ್ಯಾಧಿಕಾರಿ ಬಿ.ಸುರೇಶ್, ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಮುಖ್ಯಕಾರ್ಯನಿರ್ವಣಾಧಿಕಾರಿ ರಮೇಶ್ ಕೆ. ರೋಟರಿ ಕ್ಲಬ್ ನ ಪೂರ್ವ ಅದ್ಯಕ್ಷ ಡಾ! ಅಶ್ವಿನ್ ಸುಜೀರ್, ಖಜಾಂಚಿ ವಲ್ಲಬೇಶ ಶೆಣ್ಯೆ, ಪೂರ್ವ ಖಜಾಂಚಿ ಸುರೇಂದ್ರ ಶೆಣ್ಯೆ,
ಕಡೇಶಿವಾಲಯ ಆರ್.ಆರ್.ಸಿ. ಅದ್ಯಕ್ಷ ಕೆ.ಕೆ.ಶೆಟ್ಟಿ ಕುರುಂಬ್ಲಾಜೆ ಉಪಸ್ಥಿತರಿದ್ದರು.

ರೋಟರಿ ಸಮುದಾಯ ದಳದ ಅದ್ಯಕ್ಷ ಡಿ.ಸಂಜೀವ ಪೂಜಾರಿ ಸ್ವಾಗತಿಸಿದರು. ಪೂವಪ್ಪ ಮುಂಡಾಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯ ದರ್ಶಿ ಪ್ರದೀಪ್ ಕುಮಾರ್ ಎಂ.ವಿ.ವಂದಿಸಿದರು.
