ಗುರುಪುರ: ಹಲವು ದೀಪಗಳಿದ್ದಾಗ ಹೆಚ್ಚು ಬೆಳಕು ಸಿಗುತ್ತದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಬಲ ಬರುತ್ತದೆ. ಮಹಿಳೆಯರಿಗೆ ಗೌರವ ನೀಡುವ ಸಂಘ ಬೆಳೆಯುತ್ತದೆ. ಗುರುಪುರ ಬಂಟರ ಮಾತೃ ಸಂಘ ಅದಕ್ಕೊಂದು ನಿದರ್ಶನ. ಯುವಜನರು ಮಾದಕ ವ್ಯಸನಿಗಳಾಗದಂತೆ ಜಾಗೃತಿ ಮೂಡಿಸಿ, ಅವರು ಇಂತಹ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಭವಿಷ್ಯದಲ್ಲಿ ನಮ್ಮ ಸಂಸ್ಕøತಿಯ ಅವಿಭಾಗ್ಯ ಅಂಗವಾಗಿರುವ ಮಕ್ಕಳು ಬಂಟ ಸಂಸ್ಕøತಿ ಮುಂದುವರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಅಭಿಪ್ರಾಯಪಟ್ಟರು.

bantara mathru sanga (7)

ಗುರುಪುರದ ಶ್ರೀ ವೈದ್ಯನಾಥ ಸಭಾಗೃಹದಲ್ಲಿ ಆಯೋಜಿಸಲಾದ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ಹಿಂದೆ ಇದ್ದಂತಹ ನಮ್ಮ ತುಳು ಸಂಸ್ಕøತಿ ಈಗ ಪಾಶ್ಚಾತ್ಯ ಪ್ರಭಾವದಿಂದ ಕಳೆಗುಂದುತ್ತಿದೆ. ಪಾಶ್ಚಾತ್ಯ ಭಾಷೆ ಮಾತ್ರವಲ್ಲದೆ ಸಂಸ್ಕøಯ ಅನುಕರಣೆ ಹೆಚ್ಚಾಗುತ್ತಿದ್ದು, ಇದರ ನೇರ ಪರಿಣಾಮ ತುಳು ಭಾಷೆ ಮೇಲೆ ಆಗುತ್ತಿದೆ. ತುಳು ಭಾಷೆ ಉಳಿಯುತ್ತದೋ ಇಲ್ಲವೋ ಎಂಬ ಭೀತಿ ಉಂಟಾಗಿದೆ. ತುಳು ಭಾಷೆ, ಸಂಸ್ಕøತಿ ಉಳಿಸುವುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಬಂಟ ಸಮಾಜದ ಮಕ್ಕಳಿಗೆ ನಮ್ಮ ಸಂಸ್ಕøತಿ ತಿಳಿದುಕೊಳ್ಳಲು ಅವಕಾಶ ಕಲ್ಪಿಸಬೇಕು. ಬಂಟರು ಗುರುಹಿರಿಯರು, ಕುಟುಂಬಿಕರ ಗೌರವಿಸುವ ಪರಂಪರೆ ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಶ್ರೀ ದೇವಿ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷೆ ಮೈನಾ ಶೆಟ್ಟಿ ಹೇಳಿದರು.

bantara mathru sanga (6)

ಆಸರೆ ಚಾರಿಟೇಬಲ್ ಟ್ರಸ್ಟಿನ ಆಶಾಜ್ಯೋತಿ ರೈ ಮಾತನಾಡಿ, ನಮ್ಮಲ್ಲಿರುವ ಲೋಪದೋಷ, ತಪ್ಪು ಸರಿಪಡಿಸಿಕೊಂಡು ನಾವು ಸಶಕ್ತೀಕರಣಗೊಳ್ಳಬೇಕು. ಸಶಕ್ತೀಕರಣವೆಂದರೆ ಇನ್ನೊಬ್ಬರನ್ನು ತುಳಿದು ನಾವು ಮೇಲೆ ಹೋಗುವುದೆಂದಲ್ಲ. ಭಿನ್ನಾಭಿಪ್ರಾಯ ಸಹಜ. ಆದರೆ ಅಂತಹ ಸಂದರ್ಭದಲ್ಲೂ ಸಂಘಟನೆಯನ್ನು ಹಿಡಿದಿಟ್ಟುಕೊಂಡು ಮುನ್ನಡೆಸುವುದು ಮುಖ್ಯ. ನಾವೆಲ್ಲರೂ ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಉತ್ತಮ ಬದುಕಿನ ಬಗ್ಗೆ ಚಿಂತಿಸಬೇಕು ಎಂದು ಹೇಳಿದರು.

bantara mathru sanga (3)

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಉದ್ಯಮಿ ಉಮೇಶ್ ಮುಂಡ, ಸಂಘದ ಅಧ್ಯಕ್ಷ ತಿಂಗುಮಾರುಗುತ್ತು ರಾಜಕುಮಾರ್ ಶೆಟ್ಟಿ, ಮಹಿಳಾ ಘಟಕದ ಕಾರ್ಯದರ್ಶಿ ರೇವತಿ ಆಳ್ವ, ಉದ್ಯಮಿ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಶಾಂತಿ ರೈ ಸ್ವಾಗತಿಸಿ, ವಂದಿಸಿದರು.

ಚರ್ಚಾಗೋಷ್ಠಿ
`ಸಮಕಾಲೀನ ಸಂದರ್ಭದಲ್ಲಿ ಬಂಟರ ಅಭಿವೃದ್ಧಿಯಲ್ಲಿ ಬಂಟ ಸಂಘಟನೆಗಳ ಕೊಡುಗೆ’ ವಿಷಯದಲ್ಲಿ ಚರ್ಚಾಗೋಷ್ಠಿ ನಡೆಯಿತು. ಇದರಲ್ಲಿ ನವನೀತ ಶೆಟ್ಟಿ ಕದ್ರಿ, ವಿಭಾಗ ಮುಖ್ಯಸ್ಥೆ, ಮಾನವಿಕಾ ವಿಭಾಗ ನಿಟ್ಟೆ ವಿದ್ಯಾಲಯ, ಮಂಗಳೂರು ಡಾ. ಸಾಯಿಗೀತಾ ಶೆಟ್ಟಿ, ತುಳು ವಿದ್ವಾಂಸ ಡಾ. ಗಣನಾಥ ಎಕ್ಕಾರು ಮತ್ತು ಮಂಗಳೂರು ಬಂಟರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ್ ಅಡಪ ಸಂಕಬೈಲು ಪಾಲ್ಗೊಂಡಿದ್ದರು. ಪದಾಧಿಕಾರಿಗಳಾದ ಪರುಷೋತ್ತಮ ಮಲ್ಲಿ, ಸುದರ್ಶನ ಶೆಟ್ಟಿ ಪೆರ್ಮಂಕಿ, ಸತ್ಯಾನಂದ ಶೆಟ್ಟಿ, ಹರೀಶ್ ಶೆಟ್ಟಿ, ಸುನೀತಾ ಶೆಟ್ಟಿ, ನಳಿನಿ ಶೆಟ್ಟಿ ಮೊದಲಾವವರು ಕಾರ್ಯಕ್ರಮವನ್ನು ಸಂಯೋಜಿಸಿದರು. ಸಂಘದ ಅಧ್ಯಕ್ಷ ತಿರುವೈಲುಗುತ್ತು ರಾಜಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

bantara mathru sanga (4)

ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷರಾಗಿ ರಾಜಕುಮಾರ್ ಶೆಟ್ಟಿ ಆಯ್ಕೆ:

bantara mathru sanga (5)
2018-2020ನೇ ಸಾಲಿಗೆ ಸಂಘದ ಅಧ್ಯಕ್ಷರಾಗಿ ರಾಜಕುಮಾರ್ ಶೇಟ್ಟಿ ತಿರುವೈಲುಗುತ್ತು ಪುನರಾಯ್ಕೆಯಾದರು. ಪದಾಧಿಕಾರಿಗಳಾಗಿ ಉಪಾಧ್ಯಕ್ಷ ಸಂತೋಷ ಶೆಟ್ಟಿ ಶೆಡ್ಡೆ ಹೊಸಲಕ್ಕೆ, ಕಾರ್ಯದರ್ಶಿ ಜಯರಾಮ ರೈ, ಉಳಾಯಿಬೆಟ್ಟು, ಜೊತೆ ಕಾರ್ಯದರ್ಶಿ ಕೃಷ್ಣಕಾಂತ ಶೇಣವ ನಾರಳಗುತ್ತು, ಕೋಶಾಧಿಕಾರಿ ಸತ್ಯಾನಂದ ಶೆಟ್ಟಿ ಗುರುಪುರ, ಸಂಘಟನಾ ಕಾರ್ಯದರ್ಶಿ ಹರೀಶ ಶೆಟ್ಟಿ ಉಪ್ಪುಗೂಡು ಮತ್ತು ಉಮಾಶಂಕರ್ ಸುಲಯ ಮಟ್ಟಿ ಮಳಲಿ, ಅಧ್ಯಕ್ಷೆ, ಮಹಿಳಾ ಘಟಕ ಸುನಿತಾ ಶೆಟ್ಟಿ, ಅಧ್ಯಕ್ಷ, ಯುವ ವಿಭಾಗ ಉದಯ ಕುಮಾರ್ ಶೆಟ್ಟಿ ಬೆಳ್ಳೂರುಗುತ್ತು ಆಯ್ಕೆಯಾದರು.

By suddi9

Leave a Reply

Your email address will not be published. Required fields are marked *