ಬಂಟ್ವಾಳ: ತಾಲೂಕಿನ ಮಂಚಿ ಬೊಲ್ಪು ಕಲಾ ತಂಡದ ವತಿಯಿಂದ ಕುಕ್ಕಾಜೆ ಪ್ರಗತಿ ಶಾಲೆಯಲ್ಲಿ ‘ಆಟಿಡೊಂಜಿ ಕೂಟ’ ಕಾರ್ಯಕ್ರಮವು ಶನಿವಾರ ನಡೆಯಿತು.

ಈ ಕಾರ್ಯಕ್ರಮವನ್ನು ಶಾಲಾ ಸಂಚಾಲಕ ಸುಬೋದ್ ಭಂಡಾರಿ ಉದ್ಘಾಟಿಸಿದರು. ಮುಖ್ಯಶಿಕ್ಷಕಿ ಮೋಹಿನಿ ಎನ್. ಶೆಟ್ಟಿ, ಶೋಭಿತ ಎಸ್. ಭಂಡಾರಿ, ಹೇಮಲತಾ ಕೆ., ತಂಡದ ಅಧ್ಯಕ್ಷ ಅಶೋಕ್ ಬಿ., ಎಂ.ಡಿ. ಮಂಚಿ , ವಿಮಲೇಶ್ ಶಿಂಗಾರಕೋಡಿ, ಸೌಮ್ಯ, ಗಣೇಶ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
