ಕಳೆದ ವರ್ಷ ಗುಜರಾತ್‍ನಲ್ಲಿ ಅತ್ಯಂತ ಪೈಪೋಟಿ ಚುನಾವಣೆ ನಡೆದಿತ್ತು. ಇಡೀ ರಾಷ್ಟ್ರದ ಗಮನವನ್ನು ಗುಜರಾತ್ ಚುನಾವಣೆ ಸೆಳೆದಿತ್ತು. ಸತತ ನಾಲ್ಕು ಅವಧಿಗಳ ಕಾಲ ಗುಜರಾತ್ ರಾಜ್ಯವನ್ನು ಬಿಜೆಪಿ ಪಕ್ಷವೇ ಆಡಳಿತ ನಡೆಸಿತ್ತು. ಹತ್ತು ವರ್ಷಕ್ಕೂ ಅಧಿಕ ಕಾಲ ನರೇಂದ್ರ ಮೋದಿಯವರೇ ಗುಜರಾತ್ ನಲ್ಲಿ ಸರಕಾರವನ್ನು ನಡೆಸಿಕೊಂಡು ಬಂದಿದ್ದರು. ಅಲ್ಲದೇ ಎರಡು ದಶಕಗಳ ಕಾಲ ನಿರಂತರವಾಗಿ ಗುಜರಾತ್ ನಲ್ಲಿ ಅಧಿಕಾರ ನಡೆಸಿದ್ದಂತಹ ಭಾರತೀಯ ಜನತಾ ಪಕ್ಷವನ್ನು ಈ ಬಾರಿ ಅಧಿಕಾರದಿಂದ ಹೊರಗಿಡಬೇಕು ಎಂಬ ಯೋಚನೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಚುನಾವಣಾ ಕಣಕ್ಕಿಳಿದಿದ್ದವು.

ಹೀಗೆ ಕಣಕ್ಕಿಳಿದ ಎಲ್ಲಾ ಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಸ್ಪರ್ಧಿಸಲು ಮುಂದಾಗಿದೆ. ಅತೀ ದೊಡ್ಡ ಸಮುದಾಯ ಎಂದು ಎನಿಸಿಕೊಂಡಿರುವ ಪಟೇಲ್ ಸಮುದಾಯವನ್ನು ಎತ್ತಿ ಕಟ್ಟುವ ಉದ್ದೇಶದಿಂದ ಪಟೇಲರಿಗೆ ಮೀಸಲಾತಿ ನೀಡಬೇಕು ಎಂದು ಹಾರ್ದಿಕ್ ಪಾಟೇಲ್ ಸತತ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಾಂತ ವ್ಯಾಪಕವಾದ ಪ್ರತಿಭಟನೆಯೂ ನಡೆಯಿತು. ಈ ಪ್ರತಿಭಟನೆಯ ಮುಖ್ಯ ಉದ್ದೇಶ ಮೋದಿಯವರ ವಿರುದ್ಧ ಒಗ್ಗಟ್ಟುಗೊಳಿಸುವ ಷಡ್ಯಂತರವಿತ್ತು. ಈ ಎಲ್ಲಾ ಬೆಳವಣಿಗೆಯ ನಂತರ ಪ್ರಧಾನಿ ಮೋದಿಯವರ ನೇತೃತ್ವದಲ್ಲಿಯೇ ಬಿಜೆಪಿ ಪಕ್ಷ ಗುಜರಾತ್‍ನಲ್ಲಿ ಮತ್ತೋಮ್ಮೆ ಗೆಲುವಿನ ಪತಾಕೆ ಹಾರಿಸಿ ಅಧಿಕಾರಕ್ಕೆ ಬಂದಿತು.
ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವ್ಯಾಪಕ ಪ್ರತಿಭಟನೆಗೆ ಮೆಹಸಾನ ಎಂಬಲ್ಲಿ ಕೋಮು ಘರ್ಷಣೆ ನಡೆಯಿತು. ಈ ಪ್ರತಿಭಟನೆಯ ಮುಖ್ಯ ರೂವಾರಿ ಹಾರ್ದಿಕ್ ಪಟೇಲ್ ವಹಿಸಿಕೊಂಡಿದ್ದರು. ಮೆಹಸಾನದಲ್ಲಿ ನಡೆದ ಘಟನೆಗೆ ಹಾದಿಕ್ ಪಟೇಲ್‍ನನ್ನು ಗುಜರಾತ್ ಪೋಲಿಸರು ಬಂದಿಸಿದ್ದಾರೆ. ಈ ಪ್ರತಿಭಟನೆಯಿಂದಾಗಿ ನಡೆದ ಹಿಂಸಾಚಾರಕ್ಕೆ ಹಾರ್ದಿಕ್ ಪಟೇಲ್ ನೇರ ಕಾರಣ ಎಂದು ಕೋರ್ಟ್ ತೀರ್ಮಾನ ನೀಡಿದೆ. ಈ ತೀರ್ಪಿನ ಪ್ರಕಾರ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿದೆ. ಪಟೇಲರ ಮೀಸಲಾತಿ ಪ್ರತಿಭಟನೆ ವೇಳೆ ಬಿಜೆಪಿ ಶಾಕರ ಕಛೇರಿಯನ್ನು ಧ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹಾರ್ದಿಕ್ ಪಟೇಲ್ ಮೇಲೆ ರಾಷ್ಟದ್ರೋಹದಂತಹ ಅನೇಕ ಕೇಸುಗಳು ದಾಖಲಾಗಿವೆ.
