ವಿಟ್ಲ: ಸೈಂಟ್ ರೀಟಾ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ-ರಕ್ಷಕ ಸಭೆಯು ಜು.23 ಸೋಮವಾರದಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಿಂದ ಸಂಸ್ಥೆ ಸುಮಾರು 11 ಸ್ಮಾರ್ಟ್ ಕ್ಲಾಸ್‍ಗಳನ್ನು ಅಳವಡಿಸಿದ್ದು, ಅದನ್ನು ಸಭೆಯಲ್ಲಿ ಶಾಲಾ ಸಂಚಾಲಕರಾದ ವಂ. ಫಾ. ಎರಿಕ್ ಕ್ರಾಸ್ತಾ ಉದ್ಘಾಟಿಸಿದರು.

“ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕ-ರಕ್ಷಕರ ಪಾತ್ರ”ದ ಕುರಿತು ಸಂಪನ್ಮೂಲ ವ್ಯಕ್ತಿ ವಿಷಯ ಮಂಡಿಸಿದರು. ಮಕ್ಕಳ ಹೆತ್ತವರು ಶಾಲಾ ಪ್ರಗತಿಗಾಗಿ ಉತ್ತಮ ಸಹಕಾರ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ವಂ. ಫಾ. ಲ್ಯಾನ್ಸಿ ಜೋಯೆಲ್ ಸಲ್ಡಾನ್ಹಾ, ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ತರಬೇತುದಾರರು ಹಾಗೂ ಅಕ್ಷರ ಫೌಂಡೇಶನ್ ಮೈಸೂರು, ಇದರ ಅಧ್ಯಕ್ಷರೂ ಆಗಿರುವ ಸುನೀಲ್ ಮೈಸೂರು, ಆಡಳಿತ ಮಂಡಳಿ ಸದಸ್ಯರಾದ ಚಾಲ್ರ್ಸ್ ಸಿಕ್ವೇರಾ, ಮೀರಾ ಗೊನ್ಸಾಲ್ವೀಸ್, ಉಲ್ಲಾಸ್ ಸಿಕ್ವೇರಾ, ಅನಿತಾ ಲೋಬೋ, ಸಲಹಾ ಸಮಿತಿ ಗೌರವ ಸಲಹೆಗಾರರಾದ ಸುದರ್ಶನ್ ಪಡಿಯಾರ್. ಕ್ಲೋಡಿ ಲೋಬೋ, ಹೆನ್ರಿ ಡಿಸೋಜ, ಜಂಟಿ ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹಶಿಕ್ಷಕಿ ಸೋನಿಯಾ ಇವರು ನಿರ್ವಹಿಸಿದ್ದು, ಸಚಿನ್ ಎಮ್. ಇವರು ಸ್ವಾಗತಿಸಿದರು. ಹೆಲೆನ್ ಫುಡ್ತಾಡೊ ವಂದಿಸಿದರು.
