ಬೆಂಗಳೂರು: ಕೈಕಂಬ: ತುಮಕೂರಿನಿಂದ ಬೆಂಗಳೂರಿನಗೆ ಸಾಗುತ್ತಿದ್ದ ಕಾರೊಂದು ಕಳೆದ ರಾತ್ರಿ ನೆಲಮಂಗಲ ಸಮೀಪ  ತಾವರೆ ಕೆರೆ ಎಂಬಲ್ಲಿ  ಕೆಎಸ್ಆರ್ ಟಿಸಿ ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತಕ್ಕೀಡಾಗಿ ಇಬ್ಬರು ಸ್ಥಳದಲ್ಲೇ  ಮೃತಪಟ್ಟ ಘಟನೆ ಬುಧವಾರ  ಮುಂಜಾನೆ   ನಡೆದಿದೆ.

IMG-20180725-WA0042

ಕಾರಿನಲ್ಲಿ  ಐವರು  ಬೆಂಗಳೂರಿನಿಂದ  ತುಮಕೂರಿಗೆ ಆಗಮಿಸಿ  ಹಿಂದುರಿಗಿ  ಹೋಗುವಾಗ  ಘಟನೆ ನಡೆದಿದೆ  ಎನ್ನಲಾಗಿದೆ. ಮೃತರು       ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ತಾನದ  ಅರ್ಚಕ  ಹರಿನಾರಾಯಣ  ದಾಸ ಆಸ್ರಣ್ಣ    ಅವರ ಪುತ್ರ  ಶ್ರೀನಿಧಿ (21 ) ಮತ್ತೊಬ್ಬ   ಗುರುಪುರ ಕೈಕಂಬದ ಉಧ್ಯಮಿ  ಶ್ರೀ ರಾಮ್ ಹೋಟೇಲ್ ಮಾಲಕ  ಹರೀ ರಾವ್ ಅವರ  ಮಗಳ ಮಗ  ( ಮೊಮ್ಮಗ )   ತುಮಕೂರಿನ ಗುರುಪ್ರಸಾದ್  ಬಲ್ಲಪುರಾಯ ಹಾಗೂ ವಿದ್ಯಾಲಕ್ಷ್ಮೀ  ಅವರ ಪುತ್ರ  ಪ್ರಜ್ವಲ್( 22 )ಎಂದು ಗುರುತಿಸಲಾಗಿದೆ.

IMG-20180725-WA0047

ಕಾರಿನಲ್ಲಿ ನಾಲ್ಕೈದು ಗೆಳೆಯ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಉಳಿದವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

IMG-20180725-WA0031

IMG-20180725-WA0039

IMG-20180725-WA0040

ಮಿಜಾರಿನಲ್ಲಿರುವ ಯೇನಪೋಯಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ವ್ಯಾಸಂಗ ಮಾಡುತ್ತಿರುವ ಶರತ್, ಇಂಟರರ್ನ್‍ಶಿಪ್ಪಿಗೆಂದು ಬೆಂಗಳೂರಿಗೆ ಹೋಗುವುದಕ್ಕಿಂತ ಮುಂಚೆ ತುಮಕೂರಿಗೆ ತೆರಳಿದ್ದ. ಅಲ್ಲಿಂದ ಇವರು ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಶರತ್ ಕಾರು ಚಲಾಯಿಸುತ್ತಿದ್ದ.IMG-20180725-WA0032

“ಪ್ರಜ್ವಲ್ ಮತ್ತು ಶರತ್    ತನ್ನ   ಸಹೋದರಿಯರಿಬ್ಬರ ಪುತ್ರರು. , ಶರತನು ಭಾಸ್ಕರ್ ಉಪಾಧ್ಯಾಯ(ಕಟೀಲು) ಮತ್ತು ಪ್ರೇಮಲತಾರ ಪುತ್ರನಾಗಿದ್ದಾನೆ”ಶರತ್ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದಾನೆ ಎಂದು  ಪ್ರಜ್ವಲ್ ಅವರ ಮಾವ ಮಾಹಿತಿ ನೀಡಿದ್ದಾರೆ.IMG-20180725-WA0035

IMG-20180725-WA0036

By suddi9

Leave a Reply

Your email address will not be published. Required fields are marked *