ಮಂಗಳೂರು :- ಮಕ್ಕಿಮನೆ ಕಲಾವೃಂದದ ಲೋಗೋ ಬಿಡುಗಡೆ ಸಮಾರಂಭ ಜೆಪ್ಪು ಭಗಿನಿ ಸಮಾಜದ ಶಿಶು ನಿಲಯದಲ್ಲಿ ಜು 22 ರಂದು ಯಶಸ್ವಿಯಾಗಿ ನೆರವೇರಿತು.
ತುಳು ರಂಗಭೂಮಿ ಹಾಗೂ ಚಲನಚಿತ್ರ ನಟ ಬೋಜರಾಜ್ ವಾಮಂಜೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ದ. ಕ ಜಿಲ್ಲಾದ್ಯಕ್ಷರಾದ ಎಸ್ ಪ್ರದೀಪ ಕುಮಾರ ಕಲ್ಕೂರ ಅವರು ಸಭಾಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಲೋಗೋ ಬಿಡುಗಡೆ ಮಾಡಿ ಶುಭ ಹಾರೈಸಿದರು . ಬಿಗ್ ಬಾಸ್ ವಿಜೇತ ಕನ್ನಡ ಚಲನಚಿತ್ರ ನಟ ಪ್ರಥಮ್ ವತಿಯಿಂದ ನೀಡಿದ ಹತ್ತು ಸಾವಿರ ರೂಪಾಯಿ ಹಾಗೂ ಮಕ್ಕಿಮನೆ ಕಲಾವೃಂದದ ವತಿಯಿಂದ ಐದು ಸಾವಿರ ರೂಪಾಯಿಗಳನ್ನು ಭಗಿನಿ ಸಮಾಜದ ಶಿಶು ನಿಲಯ ಕ್ಕೆ ದೇಣಿಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ 9 ಗಲ್ಲಿಪು ಕನ್ನಡ ಕಿರುಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆ ಮಾಡಲಾಯಿತು.

logo launch-gallipu (1)
ಕರ್ನಾಟಕ ಪತ್ರಕರ್ತರ ಸಂಘದ ದ. ಕ ಜಿಲ್ಲಾದ್ಯಕ್ಷರಾದ ಸುದೇಶ್ ಕುಮಾರ್ ಮಂಗಳೂರು, ಚಲನಚಿತ್ರ ನಟ ಸಂದೀಪ್ ಶೆಟ್ಟಿ, ಚಲನಚಿತ್ರ ನಟಿ ಸ್ವಾತಿ ಬಂಗೇರ, ಭಗಿನಿ ಸಮಾಜದ ಶಿಶು ನಿಲಯದ ಅಧ್ಯಕ್ಷರಾದ ಶಾಂತಿ ಎನ್ ಪೈ, ಚಲನಚಿತ್ರ ನಿರ್ದೇಶಕ ಜಯಪ್ರಕಾಶ್ ಅಊ, 9ಗಲ್ಲಿಪು ಕಿರುಚಿತ್ರದ ಛಾಯಾಗ್ರಾಹಕ ದೇರಳಕಟ್ಟೆ ಸುರೇಶ್, ವಿಜೇಶ್ ದೇವಾಡಿಗ, ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

logo launch-gallipu (3)
ಪದ್ಮ ಪ್ರಿಯಾ ಕೇಳ ಮೂಡುಬಿದಿರೆ ಪ್ರಾರ್ಥನೆಯನ್ನು ಹಾಗೂ ಅನನ್ಯ ಬೆಳ್ತಂಗಡಿ ಪ್ರಸ್ತಾವನೆಯನ್ನು ಸಲ್ಲಿಸಿದರು. ವಿಜೆ ಗುರುಪ್ರಸಾದ್ ಕೋಟ್ಯಾನ್ ಸಭಾಕಾರ್ಯಕ್ರಮವನ್ನು ಮತ್ತು ರವೀಶ್ ಜೈನ್ ಪಡುಕೊಣಾಜೆ ಹಾಗೂ ಶ್ರೇಯಾ ಜೈನ್ ಮಂಗಳೂರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರೂಪಿಸಿದರು.

logo launch-gallipu (5)
ಸಭಾ ಕಾರ್ಯಕ್ರಮದ ನಂತರ ಮಕ್ಕಿಮನೆ ಕಲಾವೃಂದದ ಬಹುಮುಖ ಪ್ರತಿಭೆಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು .

By Suddi9

Leave a Reply

Your email address will not be published. Required fields are marked *