ಪೊಳಲಿ: ಕಾರಣಾಂತರಗಳಿಂದ ದ ಕ ಜಿಲ್ಲೆಯಲ್ಲಿ ಈಗ ಹೇಕ್ಟೇರುಗಟ್ಟಲೆ ಕೃಷಿ ಭೂಮಿ ಹಡೀಲು ಬಿದ್ದಿವೆ. ಬಡಗಬೆಳ್ಳೂರಿನಲ್ಲಿ ಹೊಸತಾಗಿ ಹುಟ್ಟಿಕೊಂಡ ಒಂದು ಸಾಮಾಜಿಕ ಸಂಸ್ಥೆ ಸ್ಥಳೀಯವಾಗಿ ಲಭ್ಯವಿರುವ ಹಡೀಲು ಜಮೀನಿನಲ್ಲಿ ಸಾವಯವ ಕೃಷಿ ಮಾಡಲು ಮುಂದಡಿ ಇಟ್ಟಿದೆ.
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರ ಮುಂದಾಳತ್ವದಲ್ಲಿ ಜುಲೈ 22ರಂದು ಬಡಗಬೆಳ್ಳೂರಿನ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಸಮಾನ ಮನಸ್ಕ ಪ್ರಗತಿಪರ ಕೃಷಿಕರ ಸಭೆಯಲ್ಲಿ `ಹಸಿರು ಪ್ರಕೃತಿ’ ಸಮಿತಿ ರಚಿಸಿ, ಹಡೀಲು ಭೂಮಿಯಲ್ಲಿ ಭತ್ತದ ಬೇಸಾಯ ನಡೆಸುವ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು.
ಮೊದಲಿಗೆ ಬಡಗಬೆಳ್ಳೂರಿನ ಐದು ಎಕ್ರೆ ಹಡೀಲು ಭೂಮಿ ಹದಗೊಳಿಸಿ ಭತ್ತದ ಕೃಷಿ ಹಾಗೂ ಋತುಮಾನ ಅವಲಂಬಿಸಿ ತರಕಾರಿ ಬೆಳೆಯುವ ಬಗ್ಗೆ ಕೃಷಿಕರು ಸಲಹೆ-ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾಯೋಗಿಕ ನೆಲೆಯಲ್ಲಿ ಕಂಡು ಬರುವ ಫಲಿತಾಂಶ ಆಧರಿಸಿ ಮುಂದಿನ ದಿನಗಳಲ್ಲಿ ಸುತ್ತಲ ಪ್ರದೇಶದಲ್ಲಿ ಸಮಿತಿಗೆ ಒದಗಿಸಬಹುದಾದ ಹಡೀಲು ಭೂಮಿಯಲ್ಲಿ ಕೃಷಿ ಮಾಡಲು ಸಾಧ್ಯವಿದೆ ಎಂಬುದು ಸಮಿತಿಯ ಅಧ್ಯಕ್ಷರೂ ಆಗಿರುವ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಹಡೀಲು ಭೂಮಿ ಬಿಟ್ಟುಕೊಡುವ ಮಾಲಕರಿಗೆ ವಾರ್ಷಿಕ ಗೇಣಿ ನೀಡಲಾಗುವುದು. ಉಳಿದಂತೆ ಭತ್ತದ ಬೈಹುಲ್ಲು ಗೋಶಾಲೆಗಳಿಗೆ ನೀಡುವುದು ಹಾಗೂ ಉಳಿಕೆ ಆದಾಯದಿಂದ ಸಮಿತಿ ಬಲಗೊಳಿಸಿ ಸಂಘವಾಗಿ ಪರಿವರ್ತಿಸಲು ತೀರ್ಮಾನಿಸಲಾಯಿತು.
……………
`ರಸಗೊಬ್ಬರ ದುಬಾರಿ ದಿನಗಳಲ್ಲಿ ನಾವು ಸಾವಯವ ಗೊಬ್ಬರದಿಂದ ಕೃಷಿ ಮಾಡಬೇಕು. ಸಾವ ಯವ ಕೃಷಿಯಲ್ಲಿ ಉತ್ತಮ ಇಳುವರಿ ಸಿಗುತ್ತದೆ. ಕೃತಕ ಗೊಬ್ಬರ ಮತ್ತು ಕೀಟನಾಶಕ ಬಳಕೆ ಮಾರಕ ರೋಗಕ್ಕೆ ಆಹ್ವಾನ. ಸಾವಯವ ಕೃಷಿಯಿಂದ ಕೃಷಿಕನೊಬ್ಬ ಸಾಕಷ್ಟು ಆದಾಯ ಗಳಿಸಲು ಸಾಧ್ಯವಿದೆ. ಆಧುನಿಕತೆ ಎನ್ನುತ್ತ, ಕೃಷಿ ವಿಷಯದಲ್ಲಿ ರಾಜಕಾರಣ ಮತ್ತು ವಿಜ್ಞಾನ ಕೃಷಿಕರನ್ನು ತಪ್ಪು ದಾರಿಗೆ ಎಳೆಯುತ್ತಿದೆ” ಅನಂತರಾಮ್ ಹೇರಳ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸ್ವಾಮಿ ವಿವೇಕಾಚೈತನ್ಯಾನಂದ , ಬೆಳ್ಳೂರುಗುತ್ತು ಕೃಷ್ಣ ಪ್ರಸಾದ್ ರೈ, ಹೊಸಮನೆ ಸಚಿಂದ್ರನಾಥ್ ಭಂಡಾರಿ, ಉಮೇಶ್ ಶೆಟ್ಟಿ ಪರಿಮೊಗರು,ರಾಧಕೃಷ್ಣ ಆಳ್ವ ಉಪಸ್ಥಿತರಿದ್ದರು.
ಸಮಿತಿಗೆ ಪಧಾದಿಕಾರಿಗಳ ಆಯ್ಕೆ : ಅದ್ಯಕ್ಷರಾಗಿ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸಲಹೆಗಾರರಾಗಿ ಅನಂತರಾಮ್ ಹೇರಳ, ಆಳ್ವ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಪರಿಮೊಗರು, ಕಾರ್ಯದರ್ಶಿ ಕೃಷ್ಣಪ್ರಸಾದ್ ಸಂಚಾಲಕ ಲತೀಶ್, ಖಜಾಂಚಿ ರಮೇಶ್ ಬಟ್ಟಾಜೆ ಮತ್ತುಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಶಶಿಕಿರಣ್ ಬೆಳ್ಳೂರು ಸ್ವಾಗತಿಸಿ , ಲತೀಶ್ ವಂದಿಸಿದರು.
ಸ
