ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹೋಬಳಿಯ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವು ಶನಿವಾರ ರೈತರೊಂದಿಗೆ ಸಂವಾದ ಕಾರ್ಯಕ್ರಮ ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮುಖ್ಯ ಅಥಿತಿ ಗಳಾದ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಇವರು ಸಾವಯವ ಕೃಷಿ ಬಗ್ಗೆ ರೈತರಿಗೆ ಕಿವಿ ಮಾತು ಹೇಳಿದರು. ಸಾವಯವ ಕೃಷಿಕರಾದ ರಾಜ್ ಕಿಶೋರ್ ಮಾತನಾಡಿ ರೈತರು ಹೆಚ್ಚು ಸಾವಯವ ಕೃಷಿಯ ಕಡೆಗೆ ಒಲವು ತೊರಿಸುವಂತೆ ಮತ್ತು ಹಲಸಿನ ಹಣ್ಣಿನ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು,ಭತ್ತದ ಬೆಳೆಯ ಸಂಪನ್ಮೂಲ ವ್ಯಕ್ಕಿಯಾಗಿ ಎಸ್ ಇಝಿಝದ್ದೀನ್,ಗೇರು ಸಂಶೋಧನಾ ವಿಜ್ಞಾನಿಯಾದ ಮಹೇಸ್ ಮಠ್ ರೈತರ ಪ್ರಶ್ನೆಗಳಿಗೆ ಮಾಹಿತಿ ನೀಡಿದರು.

ಈ ಕ್ರಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಆಲಿ ಮಂಚಿ ಗ್ರಾಮ.ಪಂ ಉಪಾದ್ಯಕ್ಷರಾದ ಮೋಹನದಾಸ ಶೆಟ್ಟಿ,ಮಂಚಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಬಿ.ಉಮ್ಮರ್,ಗ್ರಾ.ಪಂ ಸದಸ್ಯರು,ಇಲಾಖೆಯ ಅನುವುಗಾರರು, ರೈತ ಭಾಂದವರು ಭಾಗವಹಿಸಿದ್ದರು. ಆತ್ಮ ಯೋಜನೆಯ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿ,ಕೊರಗಪ್ಪ ಸಹಾಯಕ ಕೃಷಿ ಅಧಿಕಾರಿ ರೈತ ಸಂಪರ್ಕಕೇಂದ್ರ ಪಾಣೆಮಂಗಳೂರು ಸ್ವಾಗತಿಸಿ, ಸಹಾಯಕ ಕೃಷಿ ನಿರ್ದೆಶಕರಾದ ಕೆ.ನಾರಾಯಣ ಶೆಟ್ಟಿ ಪ್ರಾಸ್ತವಿಕ ಭಾóಷಣ ಮಾಡಿದರು. .ಈ ಸಂಧರ್ಭದಲ್ಲಿ ಸರಪಾಡಿ ಅಶೋಕ್ ಶೆಟ್ಟಿ ತಂಡದಿಂದ ಅನ್ನದಾತನ ವಿಮೋಚನೆ ಎಂಬ ಕಿರು ನಾಟಕ ಪ್ರದರ್ಸಿಸಲಾಯಿತು.
