ಸುದ್ದಿ9 ಕೈಕಂಬ: ನಾಗ ಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ, ಇದರ ನೂತನ ಕಟ್ಟಡದ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ಇದರ ಸಮುದಾಯ ಅಭಿವೃದ್ಧಿ ನಿಗಮ ಇದರಿಂದ ಸಂಘಕ್ಕೆ ರೂ. 50.000 ಗಳ ಅನುದಾನ ಬಿಡುಗಡೆಯಾಗಿದ್ದ ಇದರ ಮೊದಲ ಕಂತು ರೂ. 30.000 ಗಳನ್ನು ಯೋಜನೆಯ ಬಂಟ್ವಾಳ ವಲಯ ಮೆಲ್ವಿಚರಕರಾದ ಶ್ರೀ ಶಿವಪ್ಪ ಇವರೂ ಸಂಘದ ಅದ್ಯಕ್ಷರಾದ ಶ್ರ್ಈ ತಿರುಲೇಶ್ ಇವರಿಗೆ ಹಸ್ತಂತರಿಸಿದರು. ಈ ಸಂದರ್ಭದಲ್ಲಿ ಯೋಜನೆಯ ತೆಂಕಬೆಳ್ಳೂರು ಒಕ್ಕುಟದ ಅದ್ಯಕ್ಷರಾದ ಸಂದೀಪ್ ಕಮ್ಮಾಜೆ ಕಟ್ಟಡ ನಿರ್ಮಾಣ ಸಮಿತಿ ಅದ್ಯಕ್ಷರಾದ ಕಮಾಲಕ್ಷ ಪೂಜಾರಿ, ಕಾರ್ಯದರ್ಶಿ ತಿರುಮಲೇಶ್ ಬೆಳ್ಳೂರು ಹಾಗೂ ಸದಸ್ಯರು ಭಾಗವಹಿಸಿದ್ದರು.

