ಉಡುಪಿ: ಉಡುಪಿಯ ಶ್ರೀ ಕೃಷ್ಣನ ಪೂಜೆ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮೀವರ ತೀರ್ಥಶ್ರೀಪಾದ ಶಿರೂರು ಮಠದ ಸ್ವಾಮೀಜಿ(55) 2012ರಿಂದ 14ವರೆಗೆ ಪರ್ಯಾಯ ಪೀಠದಲ್ಲಿದ್ದರು. ಇವರು ಒಟ್ಟು ಮೂರು ಅವಧಿಯಲ್ಲಿ ಪರ್ಯಾಯ ಪೀಠ ಏರಿದ್ದರು.
ಆಹಾರ ವ್ಯತ್ಯಯದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಎರಡು ದಿನದಿಂದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ವಾಮೀಜಿ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ವಿಧಿವಶರಾದರು. ಮಣಿಪಾಲದ ಕಸ್ತೂರ್ಬ ಆಸ್ಪತ್ರೆಯಿಂದ ಡಾ. ರವಿಕಿರಣ್ ಅಧಿಕೃತ ಘೋಷಣೆ ನೀಡಿದರು.

