ವಿಟ್ಲ: ತಂತ್ರಜ್ಞಾನದ ಜೊತೆಗೆ ತತ್ವಜ್ಞಾನವೂ ಇರಲಿ. ಕೃಷಿಕನ ಶ್ರಮಕ್ಕೆ ಅನುಕೂಲವಾಗುವಂತೆ ಸಹಕಾರಿಸಂಘಗಳು ಶ್ರಮಿಸಲಿ. ಕೃಷಿ ಪರಂಪರೆ ಮತ್ತು ಋಷಿ ಪರಂಪರೆ ಈ ದೇಶದ ಜೀವಾಳ ಎಂದು ಶ್ರೀ ಶ್ರೀ ಶ್ರೀ ಪರಮಪೂಜ್ಯ ಗುರು ದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಒಡಿಯೂರು ಇವರು ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘ ನಿಯಮಿತ ಇದರ 3 ನೇ ನೂತನ ಫರಂಗಿಪೇಟೆ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

odiyuru shri
ಸಂಸದರಾದ ನಳಿನ್ ಕುಮಾರ್ ಕಟೀಲು ಇವರು ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಕೃಷಿ ಕ್ಷೀಣಿಸುತ್ತಿದೆ. ಕೃಷಿ ಉಪಕರಣಗಳನ್ನು ಒದಗಿಸುವ ಜೊತೆಗೆ ಕೃಷಿಕರು ಆರ್ಥಿಕವಾಗಿ ಸಬಲರಾಗುವಂತೆ ಬ್ಯಾಂಕಿಂಗ್ ವಿಭಾಗವನ್ನು ಆರಂಭಿಸಿರುವುದು ಶ್ಲಾಘನೀಯ ಇದರಿಂದಾಗಿ ರೈತರು ಸ್ವಾವಲಂಭಿಗಳಾಗುವಂತಾಗಿದೆ ಎಂದರು. ವೇದಿಕೆಯಲ್ಲಿ ಶ್ರೀ ಕೆ. ರವೀಂದ್ರ ಕಂಬಳಿ ಅಧ್ಯಕ್ಷರು, ದ.ಕ.ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಲಿ. ಮಂಗಳೂರು, ಶ್ರೀ ನಳಿನ್ ಕುಮಾರ್ ಕಟೀಲು ಲೋಕಸಭಾ ಸದಸ್ಯರು, ಮಂಗಳೂರು, ಶ್ರೀ ಎಸ್. ಆರ್. ಸತೀಶ್ಚಂದ್ರ ಅಧ್ಯಕ್ಷರು, ಕ್ಯಾಂಪ್ಕೋ ಮಂಗಳೂರು, ಶ್ರೀ ರವಿರಾಜ್ ಹೆಗ್ಡೆ, ಕೊಡವೂರು ಅಧ್ಯಕ್ಷರು. ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ.ಮಂಗಳೂರು ಮತ್ತು ಸಹಕಾರ ಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷರು, ಶ್ರೀ ಬಿ.ಕೆ,ಸಲೀಂ ಕೆ.ಸಿ.ಎಸ್.ಸಹಕಾರ ಸಂಘಗಳ ಉಪನಿಬಂಧಕರು, ದ.ಕ ಜಿಲ್ಲೆ ಮಂಗಳೂರು, ಶ್ರೀ ಕೃಷ್ಣ ಕುಮಾರ್ ಪೂಂಜ ಟ್ರಸ್ಟಿ ಸೇವಾಂಜಲಿ ಪ್ರತಿಷ್ಟಾನ, ಫರಂಗಿಪೇಟೆ, ಶ್ರೀ ರಮ್ಲಾನ್,ಮಾರಿಪಳ್ಳ ಅಧ್ಯಕ್ಷರು ಪುದು ಗ್ರಾಮ ಪಂಚಾಯತ್, ಉಪಾಧ್ಯಕ್ಷರಾದ ಸಿ. ಅಶೋಕ್ ಕುಮಾರ್ ಶೆಟ್ಟಿ, ಕಾಶಿನಾಥ್ ಬಿ. ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯನಿರ್ವಹಕರು (ಪ್ರಭಾರ),
ನಿರ್ದೇಶಕರುಗಳಾದ ಸರ್ವ ಶ್ರೀ ಕೆ.ಜಯರಾಮ ರೈ, ಕೆ. ವೇಂಕಟ್ರಮಣ ಭಟ್, ಎನ್.ಎ. ರವಿಬಸಪ್ಪ, ಭಾಸ್ಕರ ಎಸ್ ಕೋಟ್ಯಾನ್, ಎಸ್ ರಾಜು ಪೂಜಾರಿ, ಮಹಾವೀರ ಅರಿಗ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಪ್ರಮೋದ್ ಕುಮಾರ್ ರೈ, ಎಸ್.ಬಿ . ಜಯರಾಮ ರೈ, ಜಯರಾಮ ಪಿ.ಸಿ, ಯನ್ ಸೀತರಾಮ ರೈ ಪೆರಿಂಜೆ, ಆನಂದ ನಾಯ್ಕ್, ಗೋಪಾಲ ನಾಯ್ಕ್, ಶ್ರೀಮತಿ ಹೇಮಕಾಂತಿ.ಪಿ, ಶ್ರೀಮತಿ ಸುಭದ್ರಾ ಆರ್ ಭಟ್, ಶ್ರೀಮತಿ ಬಿ ವೃಂದಾ ಯು.ಪ್ರಭು ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *