ಬೆಂಗಳೂರು: ರಾಜ್ಯದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ದುಬಾರಿ ಬೆಲೆಯ ಐ ಫೋನ್ ಗಿಫ್ಟ್ ನೀಡಿರುವುದು ಬಾರೀ ವಿವಾದಕ್ಕೆ ಕಾರಣವಾಗಿದೆ. ರಾಜ್ಯದ 40 ಸಂಸದರಿಗೆ ದುಬಾರಿ ಬೆಲೆಯ ಐ ಫೋನ್ ಗಿಫ್ಟ್ ನೀಡಿರುವ ಸರ್ಕಾರ, ಮುಖ್ಯಮಂತ್ರಿಯವರು ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ವಿಷಯ ರಾಜ್ಯದ ಮುಖ್ಯಮಂತ್ರಿಗೆ ತಿಳಿಯದಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನ ಎಂದು ಬಿಜೆಪಿ ಟೀಕಿಸಿದೆ.

cm- iphone
ಸಂಸದರ ಗೌರವಾರ್ಥವಾಗಿ ದುಬಾರಿ ಐ ಫೋನ್ ಗಿಫ್ಟ್ ನೀಡಿರುವುದು ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ರೈತರ ಸಾಲಮನ್ನಾ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ರಾಜ್ಯ ಸರ್ಕಾರಕ್ಕೆ ಹಣವಿಲ್ಲ ಹೊರತಾಗಿ ಸಂಸದರಿಗೆ ದುಬಾರಿ ಬೆಲೆಬಾಳುವ ಐ ಫೋನ್ ನೀಡುವುದಕ್ಕೆ ಮುಂದಾಗಿದ್ದಾರೆ. ಇದು ರಾಜ್ಯದ ಜನತೆಯಲ್ಲಿ ಬೇಸರ ಉಂಟಾಗಿದೆ. ರಾಜ್ಯದ ಸಂಸದರ ಜೊತೆ ಕುಮಾರಸ್ವಾಮಿ ಸಭೆ ಸಡೆಸಲಿದ್ದು, ಕಾಜ್ಯದ ಸಮಸ್ಯೆಗಳಾದ ಕಾವೇರಿ ವಿವಾದ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.

By suddi9

Leave a Reply

Your email address will not be published. Required fields are marked *