ಬಂಟ್ವಾಳ: ಕರ್ನಾಟಕ ಜೈನ್ ಸ್ವಯಂ ಸೇವಾ ಟ್ರಸ್ಟ್, ವಗ್ಗ ಮಹಾವೀರ ಮಹಿಳಾ ಸ್ವಸಹಾಯ ಗುಂಪು ಬಂಟ್ವಾಳ ವಲಯ ಭಾರತೀಯ ಜೈನ್ ಮಿಲನ್ ಬಂಟ್ವಾಳ-ಶಾಖೆ 401 ಇದರ ವತಿಯಿಂದ ದ.ಕ.ಜಿಲ್ಲಾ ಜೈನ ಸಮಾಜದ ವಿದ್ಯಾರ್ಥಿಗಳ ಪುರಸ್ಕಾರ ಮತ್ತು ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ವಗ್ಗ, ಪಚ್ಚಾಜೆ ಸಭಾಭವನದಲ್ಲಿ ಜು.8 ರಂದು ಜರಗಿತು.

Vagga
ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ , ಕಾರ್ಕಳ ಇದರ ಅಧ್ಯಕ್ಷ ನೇಮಿರಾಜ್ ಆರಿಗ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಬಿೃಜೇಶ್ ಜೈನ್ ಬಾಳ್ತಿಲಬೀಡು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕಾರಿಂಜ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅವರು ಪಿ. ಜಿನರಾಜ ಆರಿಗ ಪಚ್ಚಾಜೆಗುತ್ತು ಅವರು ಜೈನ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.
ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ಬಂಟ್ವಾಳ ವಲಯ ಸಂಚಾಲಕ ವೃಷಭರಾಜ್ ಇಂದ್ರ, ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ನಿರ್ದೇಶಕ ಸುದರ್ಶನ್ ಜೈನ್ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅವರನ್ನು ಸಮ್ಮಾನಿಸಲಾಯಿತು.
ವಗ್ಗ ಮಹಾವೀರ ಮಹಿಳಾ ಸ್ವಸಹಾಯ ಗುಂಪಿನ ಅಧ್ಯಕ್ಷೆ ಅನಿತಾ ಡಿ. ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಸುಚೀಯಾ ಸಹಕರಿಸಿದರು. ಬಂಟ್ವಾಳ ಜೈನ್ ಮಿಲನ್ ಕಾರ್ಯದರ್ಶಿ ಗೀತಾ ಜಿನಚಂದ್ರ ಜೈನ್ ವಂದಿಸಿದರು. ಆದಿರಾಜ್ ಜೈನ್ ಕೊೈಕುಡೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಗುಂಪಿನ ಸದಸ್ಯರಿಂದ ಮತ್ತು ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *