ವಿಟ್ಲ: 2018-19ನೇ ಸಾಲಿನ ಸಂತ ರೀಟಾ ಅ.ಹಿ.ಪ್ರಾ.ಶಾಲೆ-ವಿಟ್ಲ ಇದರ ಶಾಲಾ ನಾಯಕಿಯಾಗಿ 7ನೇ ತರಗತಿ ಕ್ರಿಸ್ಟಲ್ ಲೋಬೊ, ಉಪನಾಯಕನಾಗಿ ಪ್ರಣೀತ್ 6ನೇ ತರಗತಿ ಆಯ್ಕೆಯಾಗಿದ್ದಾರೆ.

ಮಂತ್ರಿ ಮಂಡಲದಲ್ಲಿ ಸಭಾಪತಿಯಾಗಿ ಜೆನಿಶಾ ಪಿಂಟೋ 7ನೇ ತರಗತಿ, ಶ್ರೀರಕ್ಷಾ ಮಣಿಲ 6ನೇ ತರಗತಿ ಉಪಸಭಾಪತಿ ಮತ್ತು ವಿರೋದ ಪಕ್ಷದ ನಾಯಕನಾಗಿ ರೀತೇಶ್ 7ನೇ ತರಗತಿ ಆಯ್ಕೆ ಗೊಳಿಸಲಾಯಿತು. ಮಂತ್ರಿ ಮಂಡಲದಲ್ಲಿ 7 ಮತ್ತು 6ನೇ ತರಗತಿಯಿಂದ ಮೆಲ್ವಿಸ್ಟನ್, ಪೂರ್ವಿತ್, ಶರಣ- ನೀರಾವರಿ ಮಂತ್ರಿ, ಅನೂಫ, ಪುಣ್ಯಶ್ರೀ- ವಾರ್ತಾಮಂತ್ರಿ, ಶಾಹಿಲ್, ಪ್ರಶ್ವಿತ್, ಲಾವಣ್ಯ, ಮಾಜಿದಾ, ಚರಣ್, ಆಕಾಶ್-ಆರೋಗ್ಯಮಂತ್ರಿ, ರಂಜಿತ್ ರಾಠೋಡ್, ಸಂದೀಪ್, ಜೀವನ್-ಕ್ರೀಡಾಮಂತ್ರಿ ದಿಶಾ, ಪ್ರಜ್ಞಾ, ಚಿನ್ಮಯಿ-ಸಾಂಸ್ಕøತಿಕ ಮಂತ್ರಿಗಳಾಗಿ ಆರಿಸಲಾಯಿತು.
ಸಹಶಿಕ್ಷಕರಾದ ಲೀನಾವೇಗಸ್ ಮತ್ತು ಜಯರಾಮ ಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಆಯ್ಕೆ ಪ್ರಕಿಯೆ ನಡೆದು ಸಹಶಿಕ್ಷಕಿಯರಾದ ಬೆನಡಿಕ್ಟಾ ಡಿ’ಸೋಜ, ಮಲ್ಲಿಕಾ, ಗೀತಾ, ನವ್ಯ ಸಹಕರಿಸಿದರು.
