ವಿಟ್ಲ: ವಿದ್ಯಾರ್ಥಿ ಜೀವನದಲ್ಲಿ ಗುರಿ ಮತ್ತು ನಿರ್ಧಾರಗಳು ಅತೀ ಅಗತ್ಯವಾದ ಅಂಶಗಳಾಗಿವೆ. ವಿದ್ಯಾರ್ಥಿಯಾಗಿದ್ದಾಗ ಅದರ ಸ್ಫಷ್ಟ ನಿಲುವು ನಮ್ಮಲ್ಲಿರಬೇಕು. ಹಾಗೆಯೇ ನಮ್ಮ ದಾರಿ ಸಾಗಲು ಅನೇಕ ಅಡೆತಡೆಗಳಿವೆ. ಅವುಗಳನ್ನು ಮುನ್ನುಗಲು ಸವಾಲುಗಳನ್ನು ಎದುರಿಸಬೇಕು. ಯಾವಾಗಲೂ ಧೈರ್ಯಗುಂದದೆ ಮುನ್ನಡೆದಾಗ ಜೀವನ ಪರಿಪೂರ್ಣವಾಗುತ್ತದೆ ಎಂದು ಜೆಸಿಐನ ಸದಸ್ಯರಾದ ಜೈಕಿಶನ್ ಹೇಳಿದರು.

001

00101
ಅವರು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರದ ಎರಡನೇ ವಾರದ “ಗುರಿಯತ್ತ ನಮ್ಮ ನಡೆ” ಎಂಬ ವಿಷಯದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಉಪನ್ಯಾಸಕ ಅಣ್ಣಪ್ಪ ಸಾಸ್ತನ, ಚಂದ್ರಕಾಂತ್, ಉಪನ್ಯಾಸಕಿ ಜ್ಯೋತಿ ಎಂ. ಉಪಸ್ಥಿತರಿದ್ದರು.ವಿದ್ಯಾಥಿ ರಶ್ಮಿತಾ ಸ್ವಾಗತಿಸಿ, ಜಯಲಕ್ಷ್ಮೀ ವರದಿ ವಾಚಿಸಿ, ಫಾತಿಮತ್ ರೈಯಾನಾ ವಂದಿಸಿ, ಮುಫೀದಾ ಆಶಿಕಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *